ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ನಕಲಿ ಶ್ಯೂರಿಟಿ ಪ್ರಕರಣ ನಿನ್ನೆಯಷ್ಟೇ ಸುಖಾಂತ್ಯ ಕಂಡಿದೆ. ಇದೇ ಚಿಂತೆಯಲ್ಲಿರುವ ನಿರ್ಮಾಪಕ ಉಮಾಪತಿ ಟೆಂಪಲ್ ರನ್ ಮಾಡಿದ್ರೆ, ಇತ್ತ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಯಲ್ಲಿ ಸಿನಿಮಾ ಬೆಳವಣಿಗೆಗಳು ನಡೆಯುತ್ತಿವೆ.
ಕಳೆದ ಎರಡು ದಿನಗಳಿಂದ ನಡೆದ ಹೈಡ್ರಾಮಾ ಬಳಿಕ, ದರ್ಶನ್ ಸಿನಿಮಾಗಳ ಚರ್ಚೆಯಲ್ಲಿ ಬ್ಯುಸಿಯಾಗಿದ್ದಾರೆ. ಯಜಮಾನ ಸಿನಿಮಾದ ನಂತರ, ಮತ್ತೆ ನಿರ್ಮಾಪಕಿ ಶೈಲಜಾ ನಾಗ್ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿ ದರ್ಶನ್ ಹೇಳಿದ್ದರು. ಈಗ ಸಿನಿಮಾ ಚರ್ಚೆಯಲ್ಲಿ ದರ್ಶನ್ ತೊಡಗಿಸಿಕೊಂಡಿದ್ದಾರೆ.