ಈ ಬರ್ತ್ಡೇ 'ರಣಧೀರ'ನಿಗೆ ಸ್ಪೆಷಲ್. ಮಗಳ ಮದುವೆ ಸಂಭ್ರಮದಲ್ಲಿರುವ ಕ್ರೇಜಿ ಸ್ಟಾರ್, ಈ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದೆ, ಅಳಿಯ ಅಜಯ್ ಹಾಗೂ ಮಗಳು ಗೀತಾಂಜಲಿ ಜೊತೆ ಸೆಲೆಬ್ರೆಟ್ ಮಾಡಿದ್ದಾರೆ.
ರವಿಮಾಮನಿಗೆ ತುಂಬಿತು 58! 'ಕನಸುಗಾರ'ನಿಗೆ ದರ್ಶನ್ ಶುಭಾಷಯ - undefined
ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಇಂದು 58ನೇ ಜನ್ಮದಿನದ ಸಂಭ್ರಮ!
ದರ್ಶನ್
ಸ್ಯಾಂಡಲ್ವುಡ್ ಸ್ವಾಭಿಮಾನಿಗೆ ಚಿತ್ರರಂಗದ ಗಣ್ಯರು ಹುಟ್ಟುಹಬ್ಬದ ಶುಭಾಷಯ ತಿಳಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶ್ ಮಾಡಿ, 'ನಮ್ಮೆಲ್ಲರ ಪ್ರೀತಿಯ ಕನಸುಗಾರ, ಕ್ರೇಜಿ ಸ್ಟಾರ್ ರವಿ ಸರ್ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಯಾವಾಗಲೂ ಯಶಸ್ಸು-ಹುಮ್ಮಸ್ಸು ನಿಮ್ಮ ಜೊತೆ ಸದಾ ಇರಲಿ' ಎಂದು ಆಶಿಸಿದ್ದಾರೆ.