ಮೈಸೂರು: ಇಂದು ವಿಶ್ವ ಹುಲಿ ದಿನ, 2010 ರಿಂದ ಆರಂಭವಾದ ಈ ಹುಲಿ ದಿನವನ್ನು ಪ್ರತಿವರ್ಷ ಜುಲೈ 29 ರಂದು ಆಚರಿಸಲಾಗುತ್ತಿದೆ. ಅಳಿವಿನಂಚಿನಲ್ಲಿ ಇರುವಂತಹ ಹುಲಿಗಳ ಸಂರಕ್ಷಣೆ ಮಾಡುವುದು ಈ ಹುಲಿ ದಿನದ ಪ್ರಮುಖ ಉದ್ದೇಶ.
ವಿಶ್ವ ಹುಲಿದಿನದಂದು ಮತ್ತೊಂದು ಹುಲಿ ದತ್ತು ಪಡೆದ ನಟ ದರ್ಶನ್ - Anaconda snakes
ಪ್ರಾಣಿಪ್ರಿಯ ನಟ ದರ್ಶನ್ ಕಳೆದ 6 ವರ್ಷಗಳಿಂದ ಹುಲಿ ದತ್ತು ಪಡೆಯುತ್ತಿದ್ದು 'ವಿಶ್ವ ಹುಲಿ ದಿನ'ವಾದ ಇಂದು ಕೂಡಾ ತಮ್ಮ ಮಗನ ಹೆಸರಿನಲ್ಲಿ ಮತ್ತೊಂದು ಹುಲಿಯನ್ನು ಮೈಸೂರು ಮೃಗಾಲಯದಿಂದ ದತ್ತು ಪಡೆದಿದ್ದಾರೆ.
ಈ ವಿಶೇಷ ದಿನದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಂದು ಹುಲಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಪ್ರಾಣಿ ಪ್ರಿಯ ಆಗಿರುವ ದರ್ಶನ್ ಈಗಾಗಲೇ ಅನೇಕ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಕಳೆದ 6 ವರ್ಷಗಳಿಂದ ತಮ್ಮ ಮಗ ವಿನೀಶ್ ದರ್ಶನ್ ಹೆಸರಿನಲ್ಲಿ ದರ್ಶನ್ ಹುಲಿಗಳನ್ನು ದತ್ತು ಪಡೆಯುತ್ತಿದ್ದಾರೆ. ಈ ವರ್ಷ ಹುಲಿ ದಿನದಂದು ಮೈಸೂರಿನ ಮೃಗಾಲಯದಲ್ಲಿ ಅದೇ ಹುಲಿಯನ್ನು ಮತ್ತೊಂದು ವರ್ಷದ ಅವಧಿಗೆ 2.95 ಲಕ್ಷ ರೂಪಾಯಿ ಚೆಕ್ ನೀಡಿ ದತ್ತು ಪಡೆದಿದ್ದಾರೆ. ಈ ಹುಲಿ ಜೊತೆಗೆ ಮೈಸೂರಿನ ಮೃಗಾಲಯದಲ್ಲಿ ಮತ್ತೊಂದು ಹುಲಿ, ಎರಡು ಅನಕೊಂಡ ಹಾವು ಹಾಗೂ ಒಂದು ಆನೆಯನ್ನು ದತ್ತು ಪಡೆದಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.