ಕರ್ನಾಟಕ

karnataka

ETV Bharat / sitara

ನೆಲಗುಳಿ ಫಾರ್ಮ್​ ಹೌಸ್​ನಲ್ಲಿ ಚಿರು ಪುಣ್ಯ ತಿಥಿ... ನಟನ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ - ನಟ ಚಿರಂಜೀವಿ ಸರ್ಜಾ ನಿಧನ

ಅಕಾಲಿಕ ಮರಣಕ್ಕೆ ತುತ್ತಾದ ಕನ್ನಡದ ಸಿಂಗ ನಟ ಚಿರಂಜೀವಿ ಸರ್ಜಾರವರ 11 ದಿನದ ತಿಥಿ ಕಾರ್ಯವನ್ನು ಕುಟುಂಬಸ್ಥರು ಮುಗಿಸಿದ್ದಾರೆ.

dsdd
ಚಿರಂಜೀವಿ ಸರ್ಜಾ 11ನೇ ದಿನದ ತಿಥಿ ಕಾರ್ಯ

By

Published : Jun 17, 2020, 10:39 PM IST

ಬೆಂಗಳೂರು: ಇತ್ತೀಚಿಗೆ ನಿಧನರಾದ ನಟ ಚಿರಂಜೀವಿ ಸರ್ಜಾರವರ 11 ದಿನದ ತಿಥಿ ಕಾರ್ಯ ಹಿನ್ನೆಲೆ ಚಿರು ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ.

ಚಿರಂಜೀವಿ ಸರ್ಜಾ 11ನೇ ದಿನದ ತಿಥಿ ಕಾರ್ಯ

ಕನಕಪುರ ರಸ್ತೆಯ ನೆಲಗುಳಿ ಬಳಿ ಇರುವ ಬೃಂದಾವನ ಫಾರ್ಮ್ ಹೌಸ್​ನಲ್ಲಿ ಕುಟುಂಬ ಸದಸ್ಯರು ಮಾತ್ರ ಭಾಗಿಯಾಗಿ 11ನೇ ದಿನದ ತಿಥಿ ಕಾರ್ಯ ಮುಗಿಸಿದ್ದಾರೆ. ಸಮಾಧಿಯನ್ನು ಹೂಗಳಿಂದ ಅಲಂಕರಿಸಿ, ಸಮಾಧಿ ಸುತ್ತ ಚಿರು ಅಭಿನಯದ ಸಿನಿಮಾಗಳ ಪೊಸ್ಟರ್ ಕಟ್ಟಿ ,ಚಿರುಗೆ ಇಷ್ಟವಾದ ತಿಂಡಿ ತಿನಿಸುಗಳ ಇಟ್ಟು ಪೂಜೆ ಸಲ್ಲಿಸಿದ್ದಾರೆ.

ಇನ್ನು 11ನೇ ದಿನದ ಕಾರ್ಯಕ್ಕೂ ಮುನ್ನ ಚಿರಂಜೀವಿ ಸರ್ಜಾ ಸೋದರ ಮಾವ ಅರ್ಜುನ್ ಸರ್ಜಾ ಸೋದರಳಿಯನ ಕಳೆದುಕೊಂಡ ದುಃಖದಲ್ಲಿ ಭಾವನಾತ್ಮಕ ಓಲೆ ಬರೆದು ತಮ್ಮ ನೋವ ನ್ನು ಹೊರ ಹಾಕಿದ್ರು. ಅಲ್ಲದೆ ಅರ್ಜುನ್ ಸರ್ಜಾ ಬರೆದ ಭಾವನಾತ್ಮಕ ಓಲೆ ಒದಿದ ಅಭಿಮಾನಿಗಳು, ಜಾಲ ತಾಣಗಳಲ್ಲಿ ಅಗಲಿದ‌ ನೆಚ್ಚಿನ ನಟನ ನೆನೆದು ಭಾವನಾತ್ಮಕವಾಗಿ ಕಮೆಂಟ್ ಮಾಡಿದ್ದರು. ಆದರೆ ಅಭಿಮಾನಿಗಳಿಗೆ ಇಂದಿನ ಕಾರ್ಯಕ್ಕೆ ಪ್ರವೇಶ ನಿಷೇಧಿಸಲಾಗಿತ್ತು.

ABOUT THE AUTHOR

...view details