ಕರ್ನಾಟಕ

karnataka

ETV Bharat / sitara

'ಚಿರು' ಅಂತಿಮ ದರ್ಶನ ಪಡೆದ ಚಂದನವನದ ಕಲಾವಿದರು..! - Actor Chiranjeevi Sarja passes away

ನಟ ಚಿರಂಜೀವಿ ಸರ್ಜಾ ಸಾವಿಗೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ. ಚಿತ್ರರಂಗದ ಬಹುತೇಕ ಕಲಾವಿದರು ಚಿರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.

Chiranjeevi Sarja is no more
'ಚಿರು' ಅಂತಿಮ ದರ್ಶನ ಪಡೆದ ಚಂದನವನದ ಕಲಾವಿದರು

By

Published : Jun 7, 2020, 8:17 PM IST

ಬೆಂಗಳೂರು: ನಟ ಚಿರಂಜೀವಿ ಸರ್ಜಾ ನಿಧನದಿಂದ ಚಂದನವನದಲ್ಲಿ ದುಃಖ ಮಡುಗಟ್ಟಿದೆ. ಈಗಾಗಲೇ ಚಿತ್ರರಂಗದ ಬಹುತೇಕ ಕಲಾವಿದರು ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.

ಹಿರಿಯ ನಟ ಡಾ. ಶಿವರಾಜ್​ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಶ್ರೀಮುರುಳಿ, ಸೃಜನ್ ಲೋಕೇಶ್, ಪ್ರಜ್ವಲ್ ದೇವರಾಜ್, ಪ್ರಥಮ್, ಸಂಸದೆ ಸುಮಲತಾ ಅಂಬರೀಶ್, ನಿರ್ಮಾಪಕ ಮುನಿರತ್ನ ಅವರು, ಚಿರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

'ಚಿರು' ಅಂತಿಮ ದರ್ಶನ ಪಡೆದ ಚಂದನವನದ ಕಲಾವಿದರು

ಸದ್ಯ ಪಾರ್ಥಿವ ಶರೀರ ಅಸ್ಪತ್ರೆಯಲ್ಲಿದ್ದು ಸರ್ಕಾರದ ಅದೇಶದಂತೆ ಮೃತದೇಹದ ಕೊರೊನಾ ಟೆಸ್ಟ್ ನಂತರ ಕುಟುಂಬಕ್ಕೆ ಹಸ್ತಾಂತರಿಸಲಿದ್ದಾರೆ. ಅಲ್ಲದೆ ಕೊರೊನಾ ಭೀತಿ ನಡುವೆಯೂ ಅಭಿಮಾನಿಗಳಿಗೆ ಅಂತಿಮ ದರ್ಶನ ಪಡೆಯಲು ಅನುಮತಿ ನೀಡಲಾಗಿದೆ.

ABOUT THE AUTHOR

...view details