ಬೆಂಗಳೂರು: ನಟ ಚಿರಂಜೀವಿ ಸರ್ಜಾ (39) ನಿನ್ನೆ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದೇ ವೇಳೆ ಅವರ ಗಂಟಲಿನ ದ್ರವವನ್ನು ಕೋವಿಡ್-19 ಪರೀಕ್ಷೆಗೆ ರವಾನಿಸಲಾಗಿತ್ತು. ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ಅಪೋಲೋ ಆಸ್ಪತ್ರೆ ಮೂಲಗಳು ದೃಢಪಡಿಸಿವೆ.
ಹೃದಯಾಘಾತದಿಂದ ಮೃತಪಟ್ಟ ನಟ ಚಿರಂಜೀವಿ ಸರ್ಜಾ ಕೊರೊನಾ ವರದಿ ನೆಗೆಟಿವ್ - Actor chiranjeevi sarja corona report negative
ಚಂದನವನದ ಯುವನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಮೃತಪಟ್ಟ ಕಾರಣ ಅವರ ಗಂಟಲು ದ್ರವವನ್ನು ಕೊರೊನಾ ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿದೆ.
ನಟ ಚಿರಂಜೀವಿ ಸರ್ಜಾ ಕೊರೊನಾ ವರದಿ ನೆಗೆಟಿವ್
ಸದ್ಯ ಆಸ್ಪತ್ರೆಗಳಲ್ಲಿ ಮರಣ ಹೊಂದಿದರೆ ಕೋವಿಡ್-19 ಟೆಸ್ಟ್ ನಡೆಸಲಾಗುತ್ತಿದೆ. ಮೈಕಲ್ ಮಂಜು ಮೃತಪಟ್ಟಾಗಲೂ ಕೊರೊನಾ ಪರೀಕ್ಷೆ ನಡೆಸಿ ಬೇಗ ವರದಿ ನೀಡಲಾಗಿತ್ತು. ಚಿರಂಜೀವಿ ಸರ್ಜಾ ಅವರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಅವರ ಕೋವಿಡ್ ವರದಿ ನೆಗೆಟಿವ್ ಬಂದಿದೆ.
ಭಾನುವಾರ ಮಧ್ಯಾಹ್ನ 2:20 ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಚಿರು, 3:48 ರ ವೇಳೆಗೆ ನಿಧನರಾದರು ಎಂದು ಜಯನಗರದ ಅಪೋಲೋ ಆಸ್ಪತ್ರೆ ಘೋಷಿಸಿದೆ.
Last Updated : Jun 8, 2020, 6:56 AM IST