ಬೆಂಗಳೂರು:ಕೋವಿಡ್ ಸಂದರ್ಭದಲ್ಲಿ ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಸ್ಮಶಾನ ಕಾರ್ಮಿಕರ ಪರವಾಗಿ ನಟ ಆ ದಿನಗಳು ಚೇತನ್ ಸಿಎಂಗೆ ಪತ್ರ ಬರೆದಿದ್ದು, ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಸ್ಮಶಾನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ವೈದ್ಯಕೀಯ ವಿಮೆ ಒದಗಿಸಿಕೊಡಬೇಕು. ಆದ್ಯತೆಯ ಮೇರೆಗೆ ಕೊರೊನಾ ಲಸಿಕೆ ನೀಡಬೇಕು, ಹೆಚ್ಚು ಕೆಲಸ ಮಾಡಿದರೆ ಹೆಚ್ಚು ಸಂಬಳ ನೀಡಬೇಕು. 4 ನೇ ದರ್ಜೆಯ ಡಿ ಗ್ರೂಪ್ ನೌಕರರಿಗೆ ಶಾಶ್ವತ ಉದ್ಯೋಗ, ಪಿಎಫ್ ಸೇರಿಂದತೆ ಹಲವು ಬೇಡಿಕೆಗಳನ್ನು ಅವರು ಸಿಎಂ ಮುಂದಿಟ್ಟಿದ್ದಾರೆ.