ಕರ್ನಾಟಕ

karnataka

ETV Bharat / sitara

ಖಾಲಿ ಪೇಪರ್, ಪೆನ್ ಸಿಕ್ಬಿಟ್ರೆ ಬರ್ಕೊಂಡು ಕುಳಿತಿರುತ್ತಿದ್ರು: ಕಾರ್ನಾಡ್ ಬಗ್ಗೆ ನಟ ಚರಣ್ ರಾಜ್ ಮಾತು

ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿದ ನಟ ಚರಣ್ ರಾಜ್, ಶೂಟಿಂಗ್​ ವೇಳೆ ಅವರೊಂದಿಗಿನ ಕೆಲ ಅನುಭವಗಳನ್ನು ಹಂಚಿಕೊಂಡರು.

ಬಹುಭಾಷಾ ನಟ ಚರಣ್ ರಾಜ್

By

Published : Jun 11, 2019, 5:03 AM IST

ಇವತ್ತು ಬೆಳ್ಳಗೆ ನನಗೆ ನಂಬಲಾರದಂತ ವಿಷಯ ಕೇಳಿ ಬಂತು. ನಮ್ಮ ಆತ್ಮೀಯ, ಪ್ರೀತಿಯ ಗಿರೀಶ್ ಕಾರ್ನಾಡ್ ಅವರು ಇನ್ನಿಲ್ಲ ಅಂತ ತುಂಬಾನೇ ಬೇಜಾರು ಆಯ್ತು ಎಂದು ಗಿರೀಶ್ ಕಾರ್ನಾಡ್ ನಿಧನಕ್ಕೆ ಬಹುಭಾಷಾ ನಟ, ಕನ್ನಡಿಗ ಚರಣ್ ರಾಜ್, ಸಂತಾಪ ಸೂಚಿಸಿ, ಶೂಟಿಂಗ್​ ವೇಳೆ ಅವರೊಂದಿಗಿನ ಕೆಲ ಅನುಭವಗಳನ್ನು ಹಂಚಿಕೊಂಡರು.

ಮೊನ್ನೆ ಮೊನ್ನೆ ಒಂದು ತೆಲುಗು ಸಿನಿಮಾ ಮಾಡಿದೆ. ಅದರಲ್ಲಿ ಪವನ್ ಕಲ್ಯಾಣ್​ ಹೀರೋ, ಗಿರೀಶ್ ಕಾರ್ನಾಡ್ ಸಿಎಂ ಪಾತ್ರ ಮಾಡಿದ್ರು. ನಾನು ಒಂದು ಪೊಲೀಸ್ ಪಾತ್ರ ಮಾಡಿದ್ದೆ. ಫಸ್ಟ್ ಡೇ ನಾನು ಅವರನ್ನ ಸೆಟ್‌ನಲ್ಲಿ ನೋಡಿದಾಗ ಕಾಲಿಗೆ ನಮಸ್ಕಾರ ಮಾಡಿದೆ. ನನ್ನನ್ನ ನೋಡಿ, ಹೇ ಚರಣ ಚನ್ನಾಗಿದ್ದೀರಾ, ಬನ್ನಿ ಬನ್ನಿ ಅಂತ ಹೇಳಿದ್ರು. ಹಾಗೇ ಮಾತಾಡಿಕೊಂಡು ಕುಳಿತೆವು. ನನ್ನ ಬಗ್ಗೆ ತುಂಬಾನೇ ಮಾತಾಡಿದ್ರು, ನಾನೂ ಅವರ ಬಗ್ಗೆ ಹೇಳಿದೆ, ನನ್ನ ಬಳಿ ಕೆಲವು ವಿಷಯಗಳನ್ನ ಹಂಚಿಕೊಂಡರು ಎಂದರು.

ಬಹುಭಾಷಾ ನಟ ಚರಣ್ ರಾಜ್

ಸರ್, ನಾನು ಶಂಕರ್ ‌ನಾಗ್ ಅವರ ಜೊತೆ ಕೆಲ ಸಿನಿಮಾಗಳನ್ನು ಮಾಡ್ದೆ, ಆಗ ಶಂಕರ್ ‌ನಾಗ್ ಅವರು ನಿಮ್ಮ ಬಗ್ಗೆ ಹೇಳುತ್ತಿದ್ರು ನನಗೆ ಶಂಕರ್ ನಾಗ್ ಅವರು ತುಂಬಾ ಹೇಳ್ತಿದ್ರು, ನೋಡು ಚರಣ್ ನೀನು ತುಂಬಾ ಒಳ್ಳೆಯ ಕಲಾವಿದ, ಗಿರೀಶ್ ಕಾರ್ನಾಡ್ ಅವರ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡಿದ್ದೇ ಆದರೆ ನೀನು ನಿಜವಾಗಲೂ ಇನ್ನೂ ಒಳ್ಳೆಯ ಕಲಾವಿದ ಆಗುತ್ತೀಯ ಅಂತ ಹೇಳಿದ್ದರು ಅಂದೆ. ಅದಕ್ಕೆ ಕಾರ್ನಾಡ್​ ಅವರು, ಶಂಕರ್ ನಾಗ್ ತುಂಬಾ ಸ್ಪೀಡ್ ಅಪ್ಪ, ಆದ್ರೆ ವಿಧಿವಶಾತ್​ ನಮಗಿಂತ ಬೇಗ ಹೋಗಿ ಬಿಟ್ಟ ಅಂತ ತುಂಬಾ ಬೇಜಾರು ಮಾಡ್ಕೊಂಡ್ರು, ತುಂಬಾ ಸಲ ಶಂಕರು ಶಂಕರು ಅಂತಿದ್ರು. ಹೀಗಾಗಿ ತುಂಬಾ ಬೇಜಾರ್ ಆಯ್ತು ಇವತ್ತು ಎಂದರು.

ಗಿರೀಶ್ ಕಾರ್ನಾಡ್ ಅವರು ಎಲ್ಲೂ ಹೋಗಿಲ್ಲ, ನಮ್ಮ ನಡುವೆಯೇ ಇದ್ದಾರೆ. ಅವರ ಬಗ್ಗೆ ಹೇಳ್ಬೇಕು ಅಂದ್ರೆ, ಒಂದು ನಿಮಿಷವನ್ನೂ ಶೂಟಿಂಗ್​ನಲ್ಲಿ ವೇಸ್ಟ್ ಮಾಡುತ್ತಿರಲಿಲ್ಲ. ನಾನು 6, 7 ದಿನ ಅವರ ಜೊತೆ ಇದ್ದೆ‌. ಯಾವಾಗಲೂ ಒಂದು ಮಾತು ಹೇಳುತ್ತಿದ್ದರು, ಲೈಫ್​ನಲ್ಲಿ ಬ್ಯುಸಿಯಾಗಿ ಇರಬೇಕು ಅಂತ. ಹಾಗೇ ಖಾಲಿ ಪೇಪರ್, ಪೆನ್ ಸಿಕ್ಬಿಟ್ರೆ ಬರ್ಕೊಂಡು ಕುಳಿತಿರುತ್ತಿದ್ರು. ಎಷ್ಟು ಚೆನ್ನಾಗಿ ಕನ್ನಡ ಬರೆಯುತ್ತಿದ್ದರು ಅಂದ್ರೆ, ಆ ಪದಗಳು ಅರ್ಥ ಆಗುತ್ತಿರಲಿಲ್ಲ, ಎಕೆಂದರೆ ಅದೆಲ್ಲಾ ಹಳೆ ಕನ್ನಡ. ಅವರು ಸುಂದರ ಕತೆಗಳ ಬರಹಗಾರ, ಒಳ್ಳೆಯ ನಿರ್ದೇಶಕ, ಎಲ್ಲಾದಿಕ್ಕಿಂತ ಹೆಚ್ಚಾಗಿ ಒಳ್ಳೆಯ ನಟರು, ಅದಕ್ಕಿಂತ ಒಳ್ಳೆ ಮನುಷ್ಯರು.‌

ಅವರಿಗೆ ಇಷ್ಟ ಆದ್ರೆ ಮಾತ್ರ ಮಾತಾಡುತ್ತಿದ್ರು, ಇಷ್ಟ ಆಗಿಲ್ಲಾ ಅಂದ್ರೆ ಯಾರ ಬಳಿಯೂ ಮಾತಾಡಲ್ಲ. ಆದರೆ ಅವರ ಬಳಿ ನಾನು ತುಂಬಾ ಶಿಸ್ತು ಕಲಿತೆ. ಅವರಿಗೆ ತೆಲುಗು ಸರಿಯಾಗಿ ಬರುತ್ತಿರಲಿಲ್ಲ. ಅದಕ್ಕೆ ಅವರು ಶೂಟಿಂಗ್​ನಲ್ಲಿ ತೆಲುಗು ರೇಟರ್ನ ಕರೆಸಿಕೊಂಡು ಅವರೇ ಬರೆದುಕೊಂಡು, ಅದನ್ನ ಪ್ರಾಕ್ಟೀಸ್ ಮಾಡಿ ತೆಲುಗು ಡೈಲಾಗ್ ಹೇಳುತ್ತಿದ್ದರು ಅಂದ್ರೆ, ಅವರಲ್ಲಿ ಭಾಷೆಯ ಪ್ರಾಮುಖ್ಯತೆ ಅಷ್ಟು ಇತ್ತು. ಆದ್ರೆ ಇವತ್ತು ಅವರು ಇಲ್ಲ, ಅವರ ಕುಟುಂಬಕ್ಕೆ ದೇವರು ಒಳ್ಳೆಯದನ್ನು ಮಾಡಲಿ ಅಂತ ದೇವರ ಬಳಿ ಕೇಳಿಕೊಳ್ತೀನಿ ಎಂದು ಕಾರ್ನಾಡರ ನಿಧನಕ್ಕೆ ಚರಣ್ ರಾಜ್ ಸಂತಾಪ‌ ಸೂಚಿಸಿದರು.

For All Latest Updates

TAGGED:

ABOUT THE AUTHOR

...view details