ಬೆಂಗಳೂರು:ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಸಂಜೆ 4.45ಕ್ಕೆ ನಿಧನರಾಗಿದ್ದಾರೆ ಎಂದು ಫೋರ್ಟಿಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಬುಲೆಟ್ ಪ್ರಕಾಶ್ ಯಕೃತ್ತು ಹಾಗು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು.
ಆಸ್ಪತ್ರೆ ಬಳಿ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಹಾಗೂ ಅವರ ಹೆಂಡತಿ ಹಾಗೂ ಮಗಳ ಆಕ್ರಂದನ ಮುಗಿಲು ಮುಟ್ಟಿದೆ. ಕೊರೊನಾ ಭೀತಿಯಿಂದ ಆಸ್ಪತ್ರೆ ಬಳಿ ಜನ ಸೇರದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದಾರೆ.
ಬುಲೆಟ್ ಪ್ರಕಾಶ್ ಸಹೋದರ ನಾರಾಯಣಸ್ವಾಮಿ ನಾಳೆ ಅಂತ್ಯಕ್ರಿಯೆ:
ಪ್ರಕಾಶ್ ಅಂತ್ಯಕ್ರಿಯೆ ನಾಳೆ ನಡೆಯಲಿದೆ. ಇಂದು ಪಾರ್ಥಿವ ಶರೀರವನ್ನು ಹೆಬ್ಬಾಳ ಬಳಿಯಿರುವ ಕೆಂಪಾಪುರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಇಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ನಟ ಬುಲೆಟ್ ಪ್ರಕಾಶ್ ನಡೆದು ಬಂದ ಹಾದಿ:
- ಹುಟ್ಟೂರು: ಬೆಂಗಳೂರು
- ಜನನ ಏಪ್ರಿಲ್ 2, 1976
- ಕನ್ನಡ ಸಿನಿಲೋಕದಲ್ಲಿ ಹಾಸ್ಯನಟರಾಗಿ ಗುರುತಿಸಿಕೊಂಡಿದ್ದರು
- ರಾಯಲ್ ಎನ್‌ಫೀಲ್ಡ್ ಬೈಕ್ ಓಡಿಸುತ್ತಿದ್ದರಿಂದ ಬುಲೆಟ್ ಪ್ರಕಾಶ್ ಎಂದು ಹೆಸರು ಬಂದಿತ್ತು.
- 1999ರಲ್ಲಿ ಎ.ಕೆ 47 ಸಿನಿಮಾದಿಂದ ವೃತ್ತಿ ಬದುಕು ಆರಂಭ
- 2002ರಲ್ಲಿ ಹಾಸ್ಯನಟನಾಗಿ ಧ್ರುವಾ ಸಿನಿಮಾದಿಂದ ಎಂಟ್ರಿ ಕೊಟ್ಟ ಪ್ರಕಾಶ್
- ದರ್ಶನ್ ನಟನೆಯ ಧ್ರುವಾ ಸಿನಿಮಾ
- 325 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ
- ಸೂಂಬೆ ಅನ್ನೋ ತುಳು ಸಿನಿಮಾದಲ್ಲಿ ನಟನೆ
- 2015ರಲ್ಲಿ ಬಿಜೆಪಿಯಿಂದ ರಾಜಕೀಯ ರಂಗ ಪ್ರವೇಶ
- ಕೊನೆಯುಸಿರೆಳೆಯುವುದಕ್ಕೂ ಮುನ್ನ ಮತ್ತೊಮ್ಮೆ ದರ್ಶನ್ ಜೊತೆ ನಟಿಸಬೇಕು ಎಂಬ ಆಸೆ