ಕರ್ನಾಟಕ

karnataka

ETV Bharat / sitara

ಕೊರೊನಾ ಸಂಕಷ್ಟದಲ್ಲಿ ಇರುವವರ ಸಹಾಯಕ್ಕೆ ನಿಂತ ನಟ ಭುವನ್ ಪೊನ್ನಣ್ಣ! - ನಟ ಭುವನ್ ಪೊನ್ನಣ್ಣ

ಮುಖ್ಯವಾಗಿ ಕೊರೊನಾ ಸಂಕಷ್ಟದಲ್ಲಿ ಇರುವವರು, ಅಂದರೆ ಆಸ್ಪತ್ರೆಯಲ್ಲಿ ಬೆಡ್ ಅಥವಾ ಆಕ್ಸಿಜನ್ ಸಿಗದೇ ಇರುವವರು ನೇರವಾಗಿ ನನಗೆ ಫೋನ್ ಮಾಡಬಹುದು, ನನ್ನ ಕೈಯಲ್ಲಿ ಏನು ಸಹಾಯ ಆಗುತ್ತೆ ಅದನ್ನ ಮಾಡ್ತೀನಿ ಅಂತಾ ಭುವನ್ ಹೇಳಿದ್ದಾರೆ

Actor Bhuvan Ponnanna
Actor Bhuvan Ponnanna

By

Published : Apr 28, 2021, 7:04 PM IST

Updated : Apr 28, 2021, 7:13 PM IST

ಕನ್ನಡ ಚಿತ್ರರಂಗದಲ್ಲಿ ರಾಂಧವ ಸಿನಿಮಾ ಮೂಲಕ, ಗಮನ ಸೆಳೆದ ನಟ ಭುವನ್ ಪೊನ್ನಣ್ಣ ಸದ್ಯ ಪ್ರಣಯ ರಾಜ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಭುವನ್ ಪೊನ್ನಣ್ಣ, ಕೊರೊನಾ ಬಗ್ಗೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಮೊದಲಿಗೆ ಕೊರೊನಾ ಪಾಸಿಟಿವ್ ಆದ, ಟೈಮಲ್ಲಿ ಧೈರ್ಯವಾಗಿ ಇರಬೇಕು. ಜೊತೆಗೆ ಮೇ 1 ರಿಂದ 18 ವರ್ಷ ಮೇಲ್ಪಟ್ಟದವರು ಹೇಗೆ ಕೊರೊನಾ ಲಸಿಕೆ, ಪಡೆಯಬೇಕು ಎಂಬುದರ ಬಗ್ಗೆ ಭುವನ್ ಪೊನ್ನಣ್ಣ ಮಾಹಿತಿ ನೀಡಿದ್ದಾರೆ.

ಮುಖ್ಯವಾಗಿ ಕೊರೊನಾ ಸಂಕಷ್ಟದಲ್ಲಿ ಇರುವವರು, ಅಂದರೆ ಆಸ್ಪತ್ರೆಯಲ್ಲಿ ಬೆಡ್ ಅಥವಾ ಆಕ್ಸಿಜನ್ ಸಿಗದೇ ಇರುವವರು ನೇರವಾಗಿ ನನಗೆ ಫೋನ್ ಮಾಡಬಹುದು, ನನ್ನ ಕೈಯಲ್ಲಿ ಏನು ಸಹಾಯ ಆಗುತ್ತೆ ಅದನ್ನ ಮಾಡ್ತೀನಿ ಅಂತಾ ಹೇಳಿದ್ದಾರೆ.

ಹಾಗೇ ಒಂದು ವಾಟ್ಸ್ಆ್ಯಪ್​ ಗ್ರೂಪ್ ಕೂಡ ಮಾಡಲಾಗಿದ್ದು, ಯಾರಿಗೆ ಸಹಾಯ ಬೇಕು ಅಂಥವರು ನನಗೆ ಸಂಪರ್ಕ ಮಾಡ ಬಹುದು ಅಂತಾ ಭುವನ್ ಪೊನ್ನಣ್ಣ ಕೊರೊನಾ, ಸಂಕಷ್ಟದಲ್ಲಿ ಇರುವವರ ಸಹಾಯಕ್ಕೆ ನಿಂತಿದ್ದಾರೆ.

Last Updated : Apr 28, 2021, 7:13 PM IST

ABOUT THE AUTHOR

...view details