ಕರ್ನಾಟಕ

karnataka

ETV Bharat / sitara

ಬಿಗ್‌ಬಾಸ್ ಸ್ಪರ್ಧಿ ಭೂಮಿ ಶೆಟ್ಟಿ ಅಕೌಂಟ್ ಹ್ಯಾಕ್ - ನಟಿ ಭೂಮಿ ಶೆಟ್ಟಿ ಅಕೌಂಟ್ ಹ್ಯಾಕ್

ಇತ್ತೀಚೆಗೆ ಸೆಲೆಬ್ರೆಟಿಗಳ ಸಾಮಾಜಿಕ ಜಾಲತಾಣಗಳು ಹ್ಯಾಕ್​ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಕಿನ್ನರಿ ಧಾರಾವಾಹಿಯ ಮಣಿ ಪಾತ್ರಧಾರಿ ಮತ್ತು ಬಿಗ್​​ಬಾಸ್​​-7 ರ ಸ್ಪರ್ಧಿ ಭೂಮಿ ಶೆಟ್ಟಿ ಫೇಸ್​​​ಬುಕ್​​ ಖಾತೆಗೂ ಸೈಬರ್ ಕಳ್ಳರು ಕೈ ಹಾಕಿದ್ದಾರೆ.

actor bhoomika shetty acount hack
ಬಿಗ್ ಬಾಸ್ ಸ್ಪರ್ಧಿ ಭೂಮಿಶೆಟ್ಟಿ ಅಕೌಂಟ್ ಹ್ಯಾಕ್

By

Published : Jun 27, 2020, 1:08 PM IST

ಸೆಲೆಬ್ರಿಟಿಗಳು ಅಂದ್ಮೇಲೆ ಒಂದಲ್ಲೊಂದು ಸಮಸ್ಯೆ ಬರುವುದು ಸಹಜ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಎದುರಾಗುವ ಕಾಮನ್ ಪ್ರಾಬ್ಲಂ ಅಂದ್ರೆ ಸಾಮಾಜಿಕ ಜಾಲತಾಣಗಳ ಖಾತೆಗಳು ಹ್ಯಾಕ್ ಆಗುವುದು!. ಇತ್ತೀಚೆಗಷ್ಟೇ ನಾಗಿಣಿ ಧಾರಾವಾಹಿಯ ಅಮೃತಾ ಪಾತ್ರಧಾರಿ, ಬಿಗ್‌ಬಾಸ್ ಸೀಸನ್-7 ರ ಸ್ಪರ್ಧಿ ದೀಪಿಕಾ ದಾಸ್ ಅವರ ಇನ್​​ಸ್ಟಾಗ್ರಾಮ್​​ ಖಾತೆ ಹ್ಯಾಕ್ ಆಗಿತ್ತು. ಅದರ ಬೆನ್ನಲ್ಲೇ ಮತ್ತೋರ್ವ ನಟಿಯು ಹ್ಯಾಕಿಂಗ್ ಸಮಸ್ಯೆ ಅನುಭವಿಸುತ್ತಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ಭೂಮಿಶೆಟ್ಟಿ ಅಕೌಂಟ್ ಹ್ಯಾಕ್
ಬಿಗ್ ಬಾಸ್ ಸ್ಪರ್ಧಿ ಭೂಮಿಶೆಟ್ಟಿ ಅಕೌಂಟ್ ಹ್ಯಾಕ್
ತಮ್ಮ ಫೇಸ್ ಬುಕ್ ಖಾತೆ ಹ್ಯಾಕ್ ಆಗಿರುವುದರ ಬಗ್ಗೆ ಸ್ವತಃ ಭೂಮಿ ಶೆಟ್ಟಿ ಅವರೇ ತಿಳಿಸಿದ್ದಾರೆ. "ನನ್ನ ಫೇಸ್‌ಬುಕ್ ಪೇಜ್ ಭೂಮಿ ಶೆಟ್ಟಿ ಹ್ಯಾಕ್ ಆಗಿದೆ. ದಯವಿಟ್ಟು ಯಾರಿಗಾದ್ರೂ ಏನಾದ್ರೂ ತಪ್ಪಾಗಿ ಮೆಸೇಜ್ ಅಥವಾ ಯಾವುದಾದರೂ ಪೋಸ್ಟ್ ಬಂದರೆ ಕ್ಷಮೆ ಇರಲಿ. ಇದನ್ನು ರಿಕವರ್ ಮಾಡೋಕೆ ನಾನು ಪ್ರಯತ್ನಪಡುತ್ತಿದ್ದೇನೆ. ಯಾರಿಗಾದ್ರೂ ಇದನ್ನು ರಿಕವರ್ ಮಾಡುವ ಬಗ್ಗೆ ಗೊತ್ತಿದ್ರೆ ತಿಳಿಸಿ" ಎಂದು ಅವರು ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಗಟ್ಟಿಮೇಳ ಧಾರಾವಾಹಿಯ ಆರತಿ ಪಾತ್ರಧಾರಿ ಅಶ್ವಿನಿ, ರಾಜೇಶ್ ಧ್ರುವ, ಸುಕೃತಾ ನಾಗ್, ಹಿರಿತೆರೆ ನಟ -ನಟಿಯರಾದ ವಸಿಷ್ಠ ಸಿಂಹ, ಆಶಿಕಾ ರಂಗನಾಥ್, ಮಾನ್ವಿತಾ ಹರೀಶ್ ಅವರ ಇನ್​​ಸ್ಟಾಗ್ರಾಂ ಖಾತೆಗಳು ಹ್ಯಾಕ್ ಆಗಿತ್ತು.

ABOUT THE AUTHOR

...view details