ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅವಿನಾಶ್ ನಿಧನ ಹೊಂದಿದ್ದಾರೆಂಬ ಸುಳ್ಳು ಸುದ್ದಿ ಹಬ್ಬಿತ್ತು. ಇದಕ್ಕೆ ನಟ ಅವಿನಾಶ್ ಪ್ರತಿಕ್ರಿಯಿಸಿದ್ದು, ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.
'ನಾನು ಆರೋಗ್ಯವಾಗಿದ್ದೇನೆ. ಬೆಳಗ್ಗೆ ಒಂದು ಗಂಟೆ ವರ್ಕ್ ಔಟ್ ಮಾಡಿ ಬಂದಿದ್ದೇನೆ. ಆದ್ರೆ ಯಾರೋ ನಾನು ತೀರಿಕೊಂಡಿದ್ದೇನೆಂದು ಸುದ್ದಿ ಹಬ್ಬಿಸಿದ್ದಾರೆ. ಸದ್ಯ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದರಿಂದ ನಿರ್ಮಾಪಕರು ಹಾಗು ನಿರ್ದೇಶಕರು ಆತಂಕಕ್ಕೆ ಒಳಾಗುತ್ತಾರೆ' ಎಂದು ಹಿರಿಯ ನಟ ಬೇಸರ ವ್ಯಕ್ತಪಡಿಸಿದರು.