'ನೂರು ಜನ್ಮಕು' ಸಿನಿಮಾದಿಂದ ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ಆರ್ಯನ್ ಸಂತೋಷ್. ಲವರ್ ಬಾಯ್ ಕ್ಯಾರೆಕ್ಟರ್‌ಗಳಲ್ಲಿ ಅಭಿನಯಿಸುತ್ತಿದ್ದ ಇವರು ಇದೇ ಮೊದಲ ಬಾರಿಗೆ ಗೆಟಪ್ ಬದಲಾಯಿಸಿಕೊಂಡು 'ಡಿಯರ್ ಸತ್ಯ' ಆಗಿದ್ದಾರೆ.
ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಶ್ರೀಮುರಳಿ, ಟ್ರೇಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಉಪ್ಪಿ ಸರ್ ಹಾಡಿರುವ ಹಾಡು ಚೆನ್ನಾಗಿದೆ. ಎಲ್ಲದಕ್ಕಿಂತ ನನ್ನ ಸ್ನೇಹಿತ ಸಂತೋಷ್‌ಗೆ ಈ ಚಿತ್ರ ಯಶಸ್ಸು ತಂದು ಕೊಡಲಿ ಎಂದರು.
ಬಳಿಕ ಮಾತನಾಡಿದ ಆರ್ಯನ್ ಸಂತೋಷ್, ಈ ಚಿತ್ರವನ್ನು ಮೊದಲು ತಮಿಳಿನಲ್ಲಿ ಮಾಡಬೇಕೆಂದುಕೊಂಡಿದ್ದೆ. ಚೆನ್ನೈನ ಹೈಕೋರ್ಟ್ ಎದುರು ಪ್ಯಾರಿಸ್ ಕಾರ್ನರ್ ಎಂಬ ಸ್ಥಳವಿದೆ. ಆ ಜಾಗವೇ ನನಗೆ ಕಥೆ ರಚಿಸಲು ಸ್ಫೂರ್ತಿ. ಇದೊಂದು ನೈಜ ಘಟನೆ ಆಧಾರಿತ ಚಿತ್ರ. ಕಥೆ ಸಿದ್ಧಪಡಿಸಿಕೊಂಡ ಮೇಲೆ ನಿರ್ಮಾಪಕರ ಹುಡುಕಾಟದಲ್ಲಿ ಸಾಕಷ್ಟು ವರ್ಷ ಕಳೆದಿದ್ದೇನೆ. ನಂತರ ಗಣೇಶ್ ಪಾಪಣ್ಣ ಫೋನ್ ಮಾಡಿ ಕಥೆ ಕೇಳಿದರು. ಗಣೇಶ್, ಯತೀಶ್, ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಸಹ ಪರ್ಪಲ್ ರಾಕ್ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ಚಿತ್ರೀಕರಣ ಮುಗಿದ ತಕ್ಷಣ ಕೋವಿಡ್ ಶುರುವಾಯಿತು. ನಿರ್ಮಾಪಕರಿಗೆ ಹಾಗೂ ಚಿತ್ರತಂಡಕ್ಕೆ ನಾನು ಆಬಾರಿ ಎಂದರು.
ಜಿಗರ್ ಥಂಡ ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಶಿವಗಣೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಸಂಗೀತವಿದ್ದು, ವಿನೋದ್ ಭಾರತಿ ಛಾಯಾಗ್ರಹಣ ಮಾಡಿದ್ದಾರೆ. ಅಂದಹಾಗೆ, ಚಿತ್ರ ಮಾರ್ಚ್ 10ರಂದು ತೆರೆಕಾಣಲಿದೆ.
ಇದನ್ನೂ ಓದಿ :ಸೆನ್ಸಾರ್ನಲ್ಲಿ ಫುಲ್ ಮಾರ್ಕ್ಸ್ ಪಡೆದ ಪವರ್ ಸ್ಟಾರ್ ಜೇಮ್ಸ್!