ಕರ್ನಾಟಕ

karnataka

By

Published : Jul 2, 2021, 9:10 PM IST

ETV Bharat / sitara

17 ವರ್ಷದ ಕನಸು ನನಸು: ಆಂಜನೇಯನ ದೇಗುಲ ನಿರ್ಮಿಸಿದ ಅರ್ಜುನ್​ ಸರ್ಜಾ

ವಾಯುಪುತ್ರ ಆಂಜನೇಯನ ಭಕ್ತನಾಗಿರುವ ಅರ್ಜುನ್​ ಸರ್ಜಾ ಕೊನೆಗೂ ದೇವಸ್ಥಾನ ಕಟ್ಟಿಸುವ ಕೆಲಸದಲ್ಲಿ ಯಶಸ್ವಿಯಾಗಿದ್ದು, ಇಂದು ಅದರ ಕುಂಭಾಭಿಷೇಕ ನಡೆಸಿದ್ದಾರೆ.

Actor Arjun Sarja
Actor Arjun Sarja

ಚೆನ್ನೈ(ತಮಿಳುನಾಡು): ವಾಯುಪುತ್ರ ಹನುಮಂತನ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿರುವ ನಟ ಅರ್ಜುನ್​​​ ಸರ್ಜಾ ಕೊನೆಗೂ ತಾವು ಕಂಡಿದ್ದ ಕನಸು ಈಡೇರಿಸಿಕೊಂಡಿದ್ದಾರೆ. ಸರ್ಜಾ ಕಟ್ಟಿಸಿದ್ದ ಆಂಜನೇಯ ಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ಇಂದು ನಡೆದಿದೆ.

ದೇವಸ್ಥಾನದ ಕುಂಭಾಭಿಷೇಕ ಕಾರ್ಯಕ್ರಮ

ಸುಮಾರು 17 ವರ್ಷಗಳಿಂದ ಆಂಜನೇಯನ ಅದ್ಭುತ ದೇವಸ್ಥಾನ ನಿರ್ಮಾಣ ಮಾಡಬೇಕು ಎಂದು ಅರ್ಜುನ್​ ಸರ್ಜಾ ಸಂಕಲ್ಪ ಮಾಡಿಕೊಂಡಿದ್ದರು.

ಆಂಜನೇಯನ ದೇಗುಲ ನಿರ್ಮಿಸಿದ ನಟ ಅರ್ಜುನ್​ ಸರ್ಜಾ

ಇದರ ಬಗ್ಗೆ ಮಾತನಾಡಿದ ನಟ ಅರ್ಜುನ್ ಸರ್ಜಾ, ನನ್ನ ಹಾಗೂ ಕುಟುಂಬದ ಬಹಳ ದಿನಗಳ ಆಸೆಯಂತೆ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯ ಸಂಪೂರ್ಣಗೊಂಡಿದ್ದು, ಇದೀಗ ಕುಂಭಾಭೀಷೇಕ ನಡೆದಿದೆ. ಭಕ್ತರು ಹಾಗೂ ಸಂಬಂಧಿಕರಿಗೆ ಆಹ್ವಾನ ನೀಡಿ ಅದ್ಧೂರಿಯಾಗಿ ಸಮಾರಂಭ ನಡೆಸಬೇಕು ಎಂಬ ಆಸೆ ಇತ್ತು. ಆದರೆ ಕೋವಿಡ್ ಕಾರಣ ಯಾರಿಗೂ ಆಹ್ವಾನ ನೀಡಲ್ಲ ಎಂದು ಹೇಳಿಕೊಂಡಿದ್ದಾರೆ.

ಚೆನ್ನೈ ಏರ್​ಪೋರ್ಟ್​ನಲ್ಲಿ ಆಂಜನೇಯ ದೇವಸ್ಥಾನ

ಇದನ್ನೂ ಓದಿರಿ: ಇದನ್ನೊಮ್ಮೆ ನೋಡಿ! ಇವರು ಮನುಷ್ಯರಲ್ವೇ ಅಲ್ಲ ರಾಕ್ಷಸರು: ಮನೆ ಮಗಳ ರಕ್ತ ಹೀರುವ ವಿಷಜಂತುಗಳು!

ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್​ ಭಾಗಿಯಾಗಿದ್ದರು. ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಆಂಜನೇಯನ ಮೂರ್ತಿ 180 ಟನ್​ ಇದೆ. ಚೆನ್ನೈನ ವಿಮಾನ ನಿಲ್ದಾಣ ಬಳಿ ನಿರ್ಮಾಣಗೊಂಡಿರುವ ಆಂಜನೇಯನ ಮೂರ್ತಿ ವೀಕ್ಷಣೆಗೆ ಆಕರ್ಷಕವಾಗಿದ್ದು, ಇಂದು ನಡೆದ ಸಮಾರಂಭದಲ್ಲಿ ಅರ್ಜುನ್​​ ಸರ್ಜಾ ಹಾಗೂ ಧ್ರುವ ಸರ್ಜಾ ಕುಟುಂಬ ಮಾತ್ರ ಭಾಗಿಯಾಗಿತ್ತು.

ಪೂಜಾ ಕಾರ್ಯಕ್ರಮದಲ್ಲಿ ನಟ ಸರ್ಜಾ ಭಾಗಿ

ABOUT THE AUTHOR

...view details