ಕಿರುತೆರೆಯ ಫೇಮಸ್ ನಟ ಅನಿರುದ್ಧ್ ಈ ಹಿಂದೆ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಈ ಚಾಲೆಂಜ್ ಬಗ್ಗೆ ಬರೆದುಕೊಂಡಿದ್ದರು. ಕಡೇ ಪಕ್ಷ ಈ ಪೋಸ್ಟ್ ನಿಂದ ಪ್ರೇರಣೆಗೊಂಡು ನೂರು ಗಿಡಗಳಾನ್ನಾದರೂ ನೆಡಲಿ ಎಂಬುದು ಅವರ ಬಯಕೆ ಆಗಿತ್ತು. ಆದರೆ, ಇಲ್ಲಿ ಬರೋಬ್ಬರಿ ಎರಡು ಸಾವಿರ ಜನ ಈ ಚಾಲೆಂಜ್‌ನ ಸ್ವೀಕರಿಸಿ ಸ್ವತಃ ತಾವೇ ಗಿಡ ನೆಟ್ಟು ಫೋಟೋ ತೆಗೆದು ಕಳುಹಿಸಿದ್ದರು.
ಅನಿರುದ್ಧ ಚಾಲೆಂಜ್ಗೆ ಸಾವಿರಾರು ಮಂದಿ ಸಾಥ್.. ಅದೃಷ್ಟವಂತರಿಗೆ ಸಿಕ್ತು ಬಂಪರ್ ಗಿಫ್ಟ್!! - ಅನಿರುದ್ಧ ಹಾಕಿದ ಚಾಲೆಂಜ್
ಕಿರುತೆರೆಯ ಫೇಮಸ್ ನಟ ಅನಿರುದ್ಧ್ ಈ ಹಿಂದೆ ತಮ್ಮ ಫೇಸ್‌ಬುಕ್ ಪೇಜ್ ನಲ್ಲಿ ಈ ಚಾಲೆಂಜ್ ಬಗ್ಗೆ ಬರೆದುಕೊಂಡಿದ್ದರು. ಬರೋಬ್ಬರಿ ಎರಡು ಸಾವಿರ ಜನ ಈ ಚಾಲೆಂಜ್‌ನ ಸ್ವೀಕರಿಸಿ ಸ್ವತಃ ತಾವೇ ಗಿಡ ನೆಟ್ಟು ಫೋಟೋ ತೆಗೆದು ಕಳುಹಿಸಿದ್ದರು.
"ನೆನಪಿದೆಯಾ? ಅಂದು ಗಿಡ ನೆಡುವ ಚಾಲೆಂಜ್ ಕೊಟ್ಟಾಗ ನೀವೆಲ್ಲರೂ ಪಾಲ್ಗೊಂಡ ರೀತಿ ನಿಜಕ್ಕೂ ಹೇಳಲಸಾಧ್ಯ.. ಸಾವಿರಾರು ಮಂದಿ ಗಿಡ ನೆಟ್ಟ ಫೋಟೋಗಳನ್ನು ಕಳುಹಿಸಿದ್ದೀರಿ.. ನಿಮ್ಮೆಲ್ಲರಿಗೂ ನನ್ನ ಅನಂತ ಧನ್ಯವಾದಗಳು.. ಅದರಲ್ಲಿ ಇಬ್ಬರಿಗೆ ಈ ನನ್ನ ಸಣ್ಣ ಉಡುಗೊರೆ ತಲುಪಲಿದೆ.. ಮಿಕ್ಕೆಲ್ಲರಿಗೂ ನನ್ನ ಪ್ರೀತಿಯ ಧನ್ಯವಾದಗಳನ್ನು ಈ ಮೂಲಕ ತಲುಪಿಸುತ್ತಿರುವೆ.. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ.. Love You all ❤❤ ನಿಮ್ಮ #Anirudh ಎಂದು ತಮ್ಮ ಫೇಸ್ ಬುಕ್ ಪೇಜ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.
ಅನಿರುದ್ಧ್ ಕೊಟ್ಟ ಉಡುಗೊರೆ ಏನು?
ಇದನ್ನೆಲ್ಲಾ ಓದಿದ ಮೇಲೆ ಉಡುಗೊರೆಯ ಬಗ್ಗೆ ಕುತೂಹಲ ಮೂಡುವುದು ಸಹಜ. ಅಂದ ಹಾಗೇ ಅನಿರುದ್ಧ್ ಅವರು ಹೊಸ ವರುಷದ ಡೈರಿಯ ಜೊತೆಗೆ ಪಾರ್ಕರ್ ಪೆನ್ನುವೊಂದನ್ನು ಉಡುಗೊರೆಯನ್ನಾಗಿ ಕಳುಹಿಸಿದ್ದಾರೆ.
ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಆಗಿ ಮನೆ ಮಾತಾಗಿರುವ ಅನಿರುದ್ಧ್ ಅವರು ಕಿರುತೆರೆಯ ಮೂಲಕ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ನೂರಾರು ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಕೂಡಾ ಪಡೆದಿದ್ದಾರೆ. ಸದಾ ಕಾಲ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಅನಿರುದ್ಧ್ ಕೆಲ ದಿನಗಳ ಹಿಂದೆ ತಮ್ಮ ಅಭಿಮಾನಿಗಳಿಗೆ ಗಿಡ ನೆಡುವ ಚಾಲೆಂಜ್ ನೀಡಿದ್ದರು. ಅಭಿಮಾನಿಗಳು ಕೇವಲ ಗಿಡ ನೆಡುವುದು ಮಾತ್ರವಲ್ಲದೇ ತಾವು ನೆಟ್ಟಿರುವಂತಹ ಗಿಡದ ಫೋಟೋವನ್ನು ಅನಿರುದ್ಧ್ ಅವರ ಪೋಸ್ಟ್‌ಗೆ ಹಾಕಿ ಕಮೆಂಟ್ ಮಾಡಬೇಕಿತ್ತು.