ಕರ್ನಾಟಕ

karnataka

ETV Bharat / sitara

ಪುನೀತ್​ ಸಮಾಧಿಗೆ ಭೇಟಿ ನೀಡಿದ ನಟ ಮತ್ತು ನಿರ್ದೇಶಕ ನಾಗೇಂದ್ರ ಪ್ರಸಾದ್ - ನಿರ್ದೇಶಕ ನಾಗೇಂದ್ರ ಪ್ರಸಾದ್

ನಮ್ಮ ಅಪ್ಪಾಜಿ ನಿರ್ದೇಶನದ ಮನಸೆಲ್ಲಾ ನೀನೆ ಸಿನಿಮಾಗೆ ಅಪ್ಪು ಸಾರ್ ಕ್ಲಾಪ್ ಮಾಡಿದ್ದರು. ಸಿನಿಮಾ ಶೂಟಿಂಗ್ ಸೆಟ್​​ಗೆ ಬಂದಾಗ ತುಂಬಾನೇ ಜ್ಯೋಶ್‌ನಲ್ಲಿ ಇರ್ತಾ ಇದ್ದರು ಎಂದು ಅಪ್ಪು ನೆನೆದು ನಾಗೇಂದ್ರ ಪ್ರಸಾದ್ ಭಾವುಕರಾದರು..

ಪುನೀತ್​ ಸಮಾಧಿಗೆ ಭೇಟಿ ನೀಡಿದ ನಟ ಮತ್ತು ನಿರ್ದೇಶಕ ನಾಗೇಂದ್ರ ಪ್ರಸಾದ್
ಪುನೀತ್​ ಸಮಾಧಿಗೆ ಭೇಟಿ ನೀಡಿದ ನಟ ಮತ್ತು ನಿರ್ದೇಶಕ ನಾಗೇಂದ್ರ ಪ್ರಸಾದ್

By

Published : Nov 13, 2021, 4:08 PM IST

"ಚಿತ್ರ" ಹಾಗೂ "ಮನಸೆಲ್ಲಾ ನೀನೆ" ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಕನ್ನಡಿಗರ ಮನ ಗೆದ್ದಿದ್ದ ನಟ ಹಾಗೂ ನಿರ್ದೇಶಕ ನಾಗೇಂದ್ರ ಪ್ರಸಾದ್‌, ಇಂದು ತಮ್ಮ ಲಕ್ಕಿ ಮ್ಯಾನ್ ಚಿತ್ರ ತಂಡದ ನಾಯಕ ಡಾರ್ಲಿಂಗ್ ಕೃಷ್ಣ ಜೊತೆಗೆ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್​​​ಕುಮಾರ್ ಸಮಾಧಿಗೆ ತೆರಳಿ, ಹೂವಿನ ಹಾರ ಹಾಕುವ ಮೂಲಕ ಅಪ್ಪುಗೆ ನಮನ ಸಲ್ಲಿಸಿದರು.

ಪುನೀತ್​ ಸಮಾಧಿಗೆ ಭೇಟಿ ನೀಡಿದ ನಟ ಮತ್ತು ನಿರ್ದೇಶಕ ನಾಗೇಂದ್ರ ಪ್ರಸಾದ್

ಬಳಿಕ ಮಾತನಾಡಿದ ನಾಗೇಂದ್ರ ಪ್ರಸಾದ್, ಪುನೀತ್​​ ಅವರಿಗೆ ರೈತರ ಬಗ್ಗೆ ಎಷ್ಟು ಕಾಳಜಿ ಇತ್ತು ಎಂದರೆ, ನಮ್ಮ ಲಕ್ಕಿಮ್ಯಾನ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಕೂಲ್ ಆಗಿ ಪೆಸ್ಸಿ ತಗೋ ಎಂಬ ಸೀನ್ ಇತ್ತು.

ಇದನ್ನ ನೋಡಿದ ಪುನೀತ್ ರಾಜ್​​​ ಕುಮಾರ್, ಇಲ್ಲಿ ಪೆಸ್ಸಿ ಡ್ರಿಂಕ್ಸ್‌ಗಿಂತ ಎಳೆ ನೀರು ಬಳಸಿದರೆ ನಮ್ಮ ರೈತರಿಗೆ ಒಳ್ಳೆಯದು ಆಗುತ್ತೆ ಎಂದು ಪುನೀತ್ ಸಲಹೆ ನೀಡಿದ್ದರು.

ಡಾರ್ಲಿಂಗ್ ಕೃಷ್ಣ ಮುಖ್ಯ ಭೂಮಿಕೆಯಲ್ಲಿರೋ ಲಕ್ಕಿಮ್ಯಾನ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಒಂದು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ನಮ್ಮ ಅಪ್ಪಾಜಿ ನಿರ್ದೇಶನದ ಮನಸೆಲ್ಲಾ ನೀನೆ ಸಿನಿಮಾಗೆ ಅಪ್ಪು ಸಾರ್ ಕ್ಲಾಪ್ ಮಾಡಿದ್ದರು. ಸಿನಿಮಾ ಶೂಟಿಂಗ್ ಸೆಟ್​​ಗೆ ಬಂದಾಗ ತುಂಬಾನೇ ಜ್ಯೋಶ್‌ನಲ್ಲಿ ಇರ್ತಾ ಇದ್ದರು ಎಂದು ಅಪ್ಪು ನೆನೆದು ನಾಗೇಂದ್ರ ಪ್ರಸಾದ್ ಭಾವುಕರಾದರು.

ನಟ ಪ್ರಭುದೇವ ಸಹೋದರ ಆಗಿರುವ ನಾಗೇಂದ್ರ ಪ್ರಸಾದ್ ಬಹಳ ವರ್ಷಗಳ ಬಳಿಕ, ಕನ್ನಡದಲ್ಲಿ ಲಕ್ಕಿಮ್ಯಾನ್ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಪ್ರಭುದೇವ ಜೊತೆ ಪುನೀತ್ ರಾಜ್ ಕುಮಾರ್ ಒಂದು ಹಾಡಿನಲ್ಲಿ ಒಟ್ಟಿಗೆ ಡ್ಯಾನ್ಸ್ ಮಾಡುವ ಮೂಲಕ, ಲಕ್ಕಿ ಮ್ಯಾನ್ ಚಿತ್ರತಂಡಕ್ಕೆ ಸಪೋರ್ಟ್ ಮಾಡಿದ್ದರು.

ABOUT THE AUTHOR

...view details