ಕನ್ನಡ ಚಿತ್ರರಂಗದಲ್ಲಿ ತಾನು ಇಷ್ಟ ಬಂದ ಹಾಗೆಯೇ ಬದುಕಿ ತೋರಿಸಿದ ಏಕೈಕ ನಟ ಅಂದ್ರೆ ಅವರು ರೆಬೆಲ್ ಸ್ಟಾರ್ ಅಂಬರೀಶ್. ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ಕರ್ಣ ಅಂತ ಕರಿತಾರೆ. ಆದ್ರೆ ಕರ್ಣ ಎಂಬ ಹೆಸರು ಬರೀ ಸಿನಿಮಾಕ್ಕೆ ಸೀಮಿತವಾಗಿರದೆ, ನಿಜ ಜೀವನದಲ್ಲಿಯೂ ಅವರು ಕರ್ಣನೇ ಆಗಿದ್ದವರು.
1988ರಲ್ಲಿ ತೆರೆ ಕಂಡಿದ್ದ ಅಂಬಿ ಅಭಿನಯದ 'ತಾಯಿಗೊಬ್ಬ ಕರ್ಣ' ಚಿತ್ರ ರೆಬೆಲ್ಗೆ ಸ್ಟಾರ್ ಡಮ್ ತಂದುಕೊಟ್ಟಿತ್ತು. ಈ ಚಿತ್ರ ಅಂಬರೀಶ್ ಅವರು ನಿಜ ಜೀವನದಲ್ಲಿ ಮಾಡುತ್ತಿದ್ದ ದಾನ ಧರ್ಮಗಳನ್ನು ತೋರಿಸಿದಂತಿತ್ತು. ಅದಕ್ಕಾಗಿ ಅಂದಿನಿಂದ ಅಭಿಮಾನಿಗಳು ಪ್ರೀತಿಯ ದಿಗ್ಗಜನಿಗೆ ಕರ್ಣ ಅಂತ ಕರೆಯಲು ಪ್ರಾರಂಭಿಸಿದ್ರು. ಅಲ್ಲದೆ ಕಷ್ಟದಲ್ಲಿದ್ದ ಕನ್ನಡದ ಚಿತ್ರರಂಗದ ನಟರಿಗೆ ದಾರಿ ದೀಪ ಆಗಿದ್ದರು.
ಗಾಲ್ಫ್ ಆಟದಲ್ಲಿ ನಿರತ ಅಂಬಿ ಈ ಸಾಲಿನಲ್ಲಿ ಮೊದಲು ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಂಬಿಯನ್ನು ಅಪ್ಪಾಜಿ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ದರ್ಶನ್ ಅವರ ಮೊಟ್ಟ ಮೊದಲ ಚಿತ್ರ 'ಮೆಜಿಸ್ಟಿಕ್'ಗೆ ಕ್ಲಾಪ್ ಮಾಡುವ ಮೂಲಕ ಬೆನ್ನಿಗೆ ನಿಂತ ಜಲೀಲ ಇಂದು ಕರುನಾಡಿಗೆ ಡಿಬಾಸ್ನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರೂ ತಪ್ಪಾಗಲ್ಲ. ಅಷ್ಟೇ ಅಲ್ಲದೆ ದಾಸನ ಕೌಟುಂಬಿಕ ಕಲಹ ಕೋರ್ಟ್ ಮೆಟ್ಟಿಲೇರಿದಾಗ ಅಂಬರೀಶ್ ಅವರೆ ಮುಂದೆ ನಿಂತು ಸರಿಪಡಿಸಿದ್ದು ಎಲ್ಲರಿಗೂ ತಿಳಿದಿದೆ.
ಬಾಟಮ್ನಿಂದ ಬೆಳೆದು ಸ್ಟಾರ್ಗಿರಿ ಪಡೆದುಕೊಂಡಿರುವ ರಾಕಿಂಗ್ ಸ್ಟಾರ್ ಯಶ್, ಬೆಳವಣಿಗೆಗೆ ಅಂಬರೀಶ್ ಬೆಂಬಲ ಜಾಸ್ತಿನೇ ಇತ್ತು ಅಂತ ಸ್ವತಃ ರಾಕಿ ಭಾಯ್ ಹೇಳ್ತಾರೆ. ಯಶ್ ಅಭಿನಯದ ಬಹುತೇಕ ಚಿತ್ರಗಳಿಗೆ ಕ್ಲಾಪ್ ಹಾಗೂ ಟ್ರೈಲರ್ ರಿಲೀಸ್ಅನ್ನು ಅಂಬರೀಶ್ ಅವರೇ ಮಾಡಿದ್ದು. ಇನ್ನೊಂದು ಅಚ್ಚರಿ ಸಂಗತಿ ಅಂದ್ರೆ, ಮಂಡ್ಯದ ಗಂಡು ಕ್ಲಾಪ್ ಮಾಡಿರುವ ಯಶ್ ಚಿತ್ರಗಳು ಎಲ್ಲವೂ ದೊಡ್ಡ ಮಟ್ಟದಲ್ಲಿಯೇ ಸಕ್ಸಸ್ ಕಂಡಿವೆ. ಇದೇ ಕಾರಣಕ್ಕೆ ಯಶ್ ತಾವು ಮಾಡುವ ಯಾವುದೇ ಕೆಲಸಕ್ಕೂ ಅಂಬರೀಶ್ ಅವರ ಆರ್ಶೀವಾದ ಪಡೆಯುತ್ತಿದ್ದರು.
ಅಂಬಿ ಜೊತೆ ಅಭಿ ಮತ್ತು ಯಶ್ ಇದ್ರ ಜೊತೆಗೆ ಕನ್ನಡದ ಪ್ರಖ್ಯಾತ ಖಳ ನಟನಾಗಿದ್ದ ಸುಧೀರ್ ಕುಟುಂಬ, ಅವರ ನಿಧನ ನಂತ್ರ ತುಂಬಾ ಕಷ್ಟದಲ್ಲಿತ್ತು. ಆ ಟೈಮಲ್ಲಿ ಸುಧೀರ್ ಕುಟುಂಬಕ್ಕೆ ಆಸರೆಯಾಗಿದ್ದು ಅಂಬರೀಶ್. ಸುಧೀರ್ ಪುತ್ರರಾದ ನಂದ್ ಕಿಶೋರ್ ಹಾಗೂ ತರುಣ್ ಸುಧೀರ್ ಅವರು ತಮ್ಮ ತಂದೆ ಹೆಸರಿನಲ್ಲಿ ಮನೆ ಕಟ್ಟಿಸುವಾಗ ಅಂಬಿ ಸಹಾಯಕ್ಕೆ ಪ್ರತೀಕವಾಗಿ ಅಂಬರೀಶ್ ನಿಲಯ ಅಂತ ಮನೆಯ ನಾಮ ಫಲಕವನ್ನ ಅಭಿಮಾನಿಗಳಿಗೆ ತೋರಿಸುವ ಮೂಲಕ ಅಂಬರೀಶ್ ಸಹಾಯದ ಬಗ್ಗೆ ಕೆಲ ಸಂದರ್ಶನದಲ್ಲೂ ಹಂಚಿಕೊಂಡಿದ್ರು.
ತಾಯಿಯ ಜೊತೆ ತರುಣ್ ಸುಧೀರ್ ರೆಬೆಲ್ ಜೊತೆ ಕಳನಟ ಸುಧೀರ್ ಅಂಬರೀಶ್ ಜೊತೆ ಹಲವಾರು ಸಿನಿಮಾಗಳಲ್ಲಿ ಮಿಂಚಿದ್ದ ಸುಧಾರಾಣಿ ವೈಯಕ್ತಿಕ ಜೀವನ ಹಳಿ ತಪ್ಪಿದಾಗ, ಅಂಬರೀಶ್ ಅವರು ಸುಧಾರಾಣಿಗೆ ನೆನಪಿನಲ್ಲಿ ಇಡುವತಂಹ ಸಹಾಯ ಮಾಡಿದ್ರು. ಅಮೆರಿಕಾದಲ್ಲಿ ಗಂಡನ ಕಿರುಕುಳಕ್ಕೆ ಒಳಗಾಗಿದ್ದ ಸುಧಾರಾಣಿಯನ್ನ, ಅಧಿಕಾರ ಬಳಸಿ ಬೆಂಗಳೂರಿಗೆ ಕರೆಯಿಸಿಕೊಂಡಿದ್ದರಂತೆ. ನಂತರ ವಿಚ್ಛೇದನ ವಿಷಯದಲ್ಲಿ ಸುಧಾರಾಣಿ ಬೆಂಬಲಕ್ಕೆ ನಿಂತು, ಕಷ್ಟದಿಂದ ಪಾರು ಮಾಡಿದ್ರು ಅನ್ನೋದು ಅಂಬರೀಶ್ ಆತ್ಮೀಯರೊಬ್ಬರ ಮಾತು.
ಹೀಗೆ ಅಭಿಮಾನಿಗಳ ದೇವರಾಗಿ, ಕನ್ನಡ ಚಿತ್ರರಂಗದ ದಿಗ್ಗಜನಾಗಿ, ರಾಜಕೀಯ ನಾಯಕನಾಗಿ ಸಹಾಯ ಅಂತ ಬಂದವರಿಗೆ ಕರ್ಣನಾಗಿದ್ದ ಅಂಬಿ ಇಂದು ಅಭಿಮಾನಿಗಳ ಹೃದಯದಲ್ಲಿ ಹಚ್ಚ ಹಸಿರಾಗಿದ್ದಾರೆ.