ಮತ್ತೊಂದು ಕನ್ನಡ ಸಿನಿಮಾ ಆಂಗ್ಲ ಶೀರ್ಷಿಕೆ ಹೊತ್ತು ಬರುತ್ತಿದೆ. ಅದೇ ‘ರೈನ್ ಬೋ’. ನಿರ್ದೇಶಕ ಗುರು ದೇಶಪಾಂಡೆ ಅವರ ಬ್ಯಾನರ್ನಡಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರಕ್ಕೆ ರಾಜವರ್ಧನ ಅವರ ನಿರ್ದೇಶನ ಇರಲಿದೆ. ಅಜಯ್ ರಾವ್ ಹಾಗೂ ಮಾನ್ವಿತ ಹರೀಶ್ (ಕಾಮತ್) ತಾರಾಗಣದ ಈ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ.
ರಾಜವರ್ಧನ್ ಅವರು ನಿರ್ದೇಶಕ ಗುರು ದೇಶಪಾಂಡೆ ಅವರ ಗರಡಿಯಲ್ಲೇ ಪಳಗಿದವರು. ನಿರ್ದೇಶಕ ಆದವರು ಹೊಸ ಬ್ಯಾನರ್ ಸ್ಥಾಪನೆ ಮಾಡಿ, ತಮ್ಮ ಜೊತೆಯಾದವರನ್ನು ನಿರ್ದೇಶನಕ್ಕೆ ತರುವುದು ಚಿತ್ರರಂಗದಲ್ಲಿ ಬಹಳ ವಿರಳ. ಅಂತಹವರಲ್ಲಿ ಗುರು ಒಬ್ಬರು. ತಮ್ಮ ಸ್ವಂತ ಬ್ಯಾನರ್ನಲ್ಲಿ ತಮ್ಮ ಜತೆ ಬೆಳೆದ ಹುಡುಗನಿಗೆ ಅವಕಾಶ ನೀಡಿದ್ದಾರೆ.