ನಿನ್ನೆ ನಡೆದ 'ಮುಂದಿನ ಅಧ್ಯಾಯ' ಸಿನಿಮಾ ಟ್ರೈಲರ್ ರಿಲೀಸ್ ಕಾರ್ಯಕ್ರಮ ಒಂದು ರೀತಿಯ ವಿವಾದದ ಕೇಂದ್ರವಾಗಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಭಾಗವಹಿಸಿ ಆದಿತ್ಯಗೆ ವಿಶ್ ಮಾಡಿದ್ರು.
ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ ನಟ ಆದಿತ್ಯ: ಯಾಕೆ ಈ ಸಿಟ್ಟು ಗೊತ್ತಾ? - ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ ನಟ ಆದಿತ್ಯ
ನಟ ಆದಿತ್ಯ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದಾರೆ. ಮಾಧ್ಯಮಗಳು ಗೆಳೆಯರ ನಡುವೆ ಕಾಂಟ್ರವರ್ಸಿ ಕ್ರಿಯೇಟ್ ಮಾಡುತ್ತಿವೆ. ಜನರಿಗೆ ಒಳ್ಳೆಯ ಅಂಶ ಇರುವ ಸುದ್ದಿಯನ್ನು ಕೊಡಿ. ಗೆಳೆಯರ ನಡುವೆ ದ್ವೇಷ ಬೆಳೆಸುವಂತೆ ಮಾಡಬೇಡಿ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕನ್ನಡದ ಪ್ರಮುಖ ನಿರ್ದೇಶಕರ ಫೋಟೋಗಳನ್ನು ಬಳಸಿ ಒಂದು ವಿಟಿ ತಯಾರಿಸಲಾಗಿತ್ತು. ಆದ್ರೆ ಉದ್ದೇಶ ಪೂರ್ವಕವಾಗಿಯೋ ಅಥವಾ ವಿಟಿ ತಯಾರಕರ ಕೈತಪ್ಪಿಯೋ ಸುದೀಪ್ ಫೋಟೋ ಆ ವಿಟಿಯಲ್ಲಿ ಕಾಣಿಸಿಲ್ಲ. ಈ ವಿಚಾರದಿಂದಾಗಿ, ದರ್ಶನ್ ಈ ಕಾರ್ಯಕ್ರಮಕ್ಕೆ ಬಂದಿರುವುದರಿಂದ ಸುದೀಪ್ ಫೋಟೋಗಳನ್ನು ಹಾಕಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಹಾಗೂ ಸ್ಟಾರ್ ವಾರ್ ಮತ್ತೆ ಶುರುವಾಯ್ತು ಎಂದು ಹೇಳಲಾಗಿತ್ತು.
ಇದಕ್ಕೆ ಮಾಧ್ಯಮಗಳ ವಿರುದ್ಧ ಬೇಸರ ವ್ಯಕ್ತಪಡಿಸಿರುವ ನಟ ಆದಿತ್ಯ, ಮೀಡಿಯಾ ಮಾಫಿಯಾ. ಮಾಧ್ಯಮಗಳು ಗೆಳೆಯರ ನಡುವೆ ಕಾಂಟ್ರವರ್ಸಿ ಕ್ರಿಯೇಟ್ ಮಾಡುತ್ತಿವೆ. ಇದನ್ನು ನಿಲ್ಲಿಸಿ. ಸಿನಿಮಾ ಟ್ರೈಲರ್ ಬಗ್ಗೆ ಒಳ್ಳೆಯದನ್ನು ಬರೆಯಿರಿ. ಜನರಿಗೆ ಒಳ್ಳೆಯ ಅಂಶ ಇರುವ ಸುದ್ದಿಯನ್ನು ಕೊಡಿ. ಗೆಳೆಯರ ನಡುವೆ ದ್ವೇಷ ಬೆಳೆಸುವಂತೆ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.