ಕರ್ನಾಟಕ

karnataka

ETV Bharat / sitara

ಯುವ ನಟ-ನಟಿಯರು ಮಾದಕ ನಶೆಯಲ್ಲಿದ್ದಾರೆ: ನಟ ಆದಿ ಲೋಕೇಶ್ - ಡ್ರಗ್ಸ್ ಮಾಫಿಯಾ ಬಗ್ಗೆ ಆದಿ ಲೋಕೇಶ್ ಹೇಳಿಕೆ

ಸ್ಯಾಂಡಲ್​ವುಡ್ ಡ್ರಗ್ಸ್​ ಮಾಫಿಯಾ ಬಗ್ಗೆ ನಟ ಆದಿ ಲೋಕೇಶ್ ಪ್ರತಿಕ್ರಿಯಿಸಿದ್ದಾರೆ.

adi lokesh talks about sandalwood drug mafia
ಆದಿ ಲೊಕೇಶ್, ನಟ

By

Published : Aug 30, 2020, 2:58 PM IST

ಬೆಂಗಳೂರು:ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ದಂಧೆಯ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದ್ದು ಈ ಬಗ್ಗೆ ಮಾತನಾಡಿರುವ ನಟ ಆದಿ ಲೋಕೇಶ್, "ಕನ್ನಡ ಚಿತ್ರರಂಗದ ಯುವ ನಟ, ನಟಿಯರು ಮಾದಕ ನಶೆಯಲ್ಲಿ ಇದ್ದಾರೆ" ಎಂದು ತಿಳಿಸಿದ್ದಾರೆ.

ಆದಿ ಲೊಕೇಶ್, ನಟ

"ಶೂಟಿಂಗ್ ಸಮಯದಲ್ಲಿ ನನಗೆ ಅನುಭವ ಆಗಿದೆ. ರಾತ್ರಿಯೆಲ್ಲಾ ಪಾರ್ಟಿ ಮಾಡಿ ಬೆಳಗ್ಗೆ ಶೂಟಿಂಗ್​ಗೆ ಬರುತ್ತಾರೆ. ಅವರ ಜೊತೆ ಕೆಲಸ ಮಾಡುವಾಗ ನನಗೆ ಇರಿಸುಮುರಿಸಾಗಿದೆ. ಆದರೆ ಇಡೀ ಚಿತ್ರರಂಗ ಡ್ರಗ್ಸ್ ದಂಧೆಯಲ್ಲಿ ಇಲ್ಲ" ಎಂದು ಆದಿ ಲೋಕೇಶ್ ನಮ್ಮ ಪ್ರತಿನಿಧಿ ನಡೆಸಿದ ಚಿಟ್​ಚಾಟ್​ನಲ್ಲಿ ತಿಳಿಸಿದರು.

ABOUT THE AUTHOR

...view details