ಬೆಂಗಳೂರು : ಡ್ರಗ್ಸ್ ಮಾಫಿಯಾ ಸಂಬಂಧ ಆರು ಗಂಟೆಗಳ ಕಾಲ ಐಎಸ್‌ಡಿ ವಿಚಾರಣೆ ಮುಗಿಸಿ ಗಟ್ಟಿಮೇಳ ಧಾರಾವಾಹಿಯ ಕಿರುತೆರೆ ನಟ ಅಭಿಷೇಕ್ ಹೊರ ಬಂದಿದ್ದಾರೆ. ಶಾಂತಿನಗರದಲ್ಲಿರುವ ಐಎಸ್‌ಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ ಹಿನ್ನೆಲೆ ತನಿಖಾಧಿಕಾರಿಗಳ ಎದುರು ಇಂದು ಹಾಜರಾಗಿದ್ದರು.
ಗಟ್ಟಿಮೇಳ ಧಾರಾವಾಹಿ ನಟನಿಗೆ ಐಎಸ್‌ಡಿ ಡ್ರಿಲ್.. ನಾನು ಡ್ರಗ್ಸ್ ಸೇವಿಸಲ್ಲ ಎಂದ ಅಭಿಷೇಕ್ - ಅಭಿಷೇಕ್ ದಾಸ್
ನಾನು ಡ್ರಗ್ಸ್ ಸೇವನೆ ಮಾಡುವುದಿಲ್ಲ, ನನಗೆ ಗೊತ್ತಿರುವ ಮಾಹಿತಿಯನ್ನ ಶೇರ್ ಮಾಡಿದ್ದೇನೆ. ಅಗತ್ಯವಿದ್ದಲ್ಲಿ ಮತ್ತೆ ವಿಚಾರಣೆಗೆ ಬರಲಿದ್ದೇನೆ. ನನ್ನ ಮೊಬೈಲ್‌ನ ವಶಕ್ಕೆ ಪಡೆದಿಲ್ಲ..
ವಿಚಾರಣೆ ಬಳಿಕ ಅಭಿಷೇಕ್ ದಾಸ್ ಮಾಧ್ಯಮ ಜೊತೆ ಮಾತಾಡಿ, ಡ್ರಗ್ಸ್ ಮಾಫಿಯಾದ ಅನುಮಾನವಿರುವ ವ್ಯಕ್ತಿಗಳು ನಮಗೆ ಪರಿಚಯವಿದ್ದರಾ ಎಂದು ತಿಳಿಯಲು ಕರೆಸಿದ್ದರು. ಐಎಸ್‌ಡಿ ಬಂಧಿಸಿರುವವರೊಂದಿಗೆ ನಮಗೆ ಸಂಪರ್ಕ ಇದೆಯಾ? ಯಾವುದಾದ್ರೂ ಪಾರ್ಟಿಗಳಲ್ಲಿ ಪರಿಚಯವಾಗಿದ್ರಾ? ನನ್ನ ಫೋನ್‌ನಿಂದ ಕರೆಗಳು ಹೋಗಿದೆಯಾ ಎಂಬ ಬಗ್ಗೆ ಪ್ರಶ್ನಿಸಿದ್ರು. ಹಾಗೆ 1 ತಿಂಗಳ ಫೋನ್ ಕರೆ ವಿವರ ಪರಿಶೀಲಿಸಿದ್ರು.
ನಾನು ಡ್ರಗ್ಸ್ ಸೇವನೆ ಮಾಡುವುದಿಲ್ಲ, ನನಗೆ ಗೊತ್ತಿರುವ ಮಾಹಿತಿಯನ್ನ ಶೇರ್ ಮಾಡಿದ್ದೇನೆ. ಅಗತ್ಯವಿದ್ದಲ್ಲಿ ಮತ್ತೆ ವಿಚಾರಣೆಗೆ ಬರಲಿದ್ದೇನೆ. ನನ್ನ ಮೊಬೈಲ್‌ನ ವಶಕ್ಕೆ ಪಡೆದಿಲ್ಲ ಎಂದು ಹೇಳಿ ತೆರಳಿದ್ದಾರೆ.