ಬೆಂಗಳೂರು: ನಿಖಿಲ್ ಕುಮಾರಸ್ವಾಮಿಗೆ ಒಳ್ಳೆಯ ಭವಿಷ್ಯವಿದೆ. ಅವರಿಗೆ ಒಳ್ಳೆಯದಾಗಲಿ ಎಂದು ನೂತನ ಎಂಪಿ ಸುಮಲತಾ ಅಂಬರೀಶ್ ಅವರ ಪುತ್ರ ಅಭಿಷೇಕ್ ಆಶಿಸಿದ್ದಾರೆ.
'ನಿಖಿಲ್ಗೆ ಇನ್ನಷ್ಟು ಅವಕಾಶಗಳು ಸಿಗ್ತವೆ, ಅವರಿಗೆ ಒಳ್ಳೆಯದಾಗಲಿ' ಎಂದ ಅಭಿ - undefined
ನಿಖಿಲ್ ನಂಗೆ ಈಗಲೂ ಸ್ನೇಹಿತ. ಸುಮ್ಮನೆ ಅಪಾರ್ಥ ಮಾಡಿಕೊಳ್ಳಬಾರದೆಂದು ಫಲಿತಾಂಶ ಬಂದ ನಂತರ ಅವರಿಗೆ ಕರೆ ಮಾಡೋಕೆ ಹೋಗಿಲ್ಲ ಎಂದರು ಅಭಿಷೇಕ್ ಅಂಬರೀಶ್.
!['ನಿಖಿಲ್ಗೆ ಇನ್ನಷ್ಟು ಅವಕಾಶಗಳು ಸಿಗ್ತವೆ, ಅವರಿಗೆ ಒಳ್ಳೆಯದಾಗಲಿ' ಎಂದ ಅಭಿ](https://etvbharatimages.akamaized.net/etvbharat/prod-images/768-512-3374022-thumbnail-3x2-abhishek.jpg)
ಇಂದು ದಿವಂಗತ ನಟ ಅಂಬರೀಶ್ ಅವರ 6ನೇ ತಿಂಗಳ ಪುಣ್ಯ ಸ್ಮರಣೆ ನಿಮಿತ್ತ ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ನಂಗೆ ಈಗಲೂ ಸ್ನೇಹಿತ. ಸುಮ್ಮನೆ ಅಪಾರ್ಥ ಮಾಡಿಕೊಳ್ಳಬಾರದೆಂದು ಫಲಿತಾಂಶ ಬಂದ ನಂತರ ಅವರಿಗೆ ಕರೆ ಮಾಡೋಕೆ ಹೋಗಿಲ್ಲ. ಅವರಿಗೆ ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚು ಅವಕಾಶಗಳು ಸಿಗುತ್ತವೆ ಎಂದರು. ಇದೇ ವೇಳೆ ಮಂಡ್ಯ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಗೆಲುವು ಕೊಟ್ಟಿದ್ದಾರೆ. ಇದು ಮಂಡ್ಯ ಜನರು ಕೊಟ್ಟ ಭಿಕ್ಷೆ. ಅವರಿಗೆ ಧನ್ಯವಾದಗಳು ಎಂದರು.
ಇನ್ನು ತಮ್ಮ ಅಮರ್ ಸಿನಿಮಾ ಬಗ್ಗೆ ಮಾತಾಡಿದ ಅಭಿ, ಸಿನಿಮಾ ಚೆನ್ನಾಗಿದ್ರೆ ಜನ ನೋಡ್ತಾರೆ, ಥಿಯೇಟರ್ ಮುಂದೆ ಕಟೌಟ್ ನಿಲ್ಲಿಸ್ತಾರೆ. ಇಲ್ಲದಿದ್ರೆ ಅಲ್ಲೇ ಅದನ್ನು ಬೀಳಿಸ್ತಾರೆ ಎಂದು ಅಪ್ಪನ ಗತ್ತಿನಲ್ಲೇ ಜೂನಿಯರ್ ಜಲೀಲಾ ಮಾತನಾಡಿದ್ರು.