ಚಿತ್ರದ ಟೈಟಲ್ ಹಾಗೂ ಮೇಕಿಂಗ್ನಿಂದಲೇ ಸದ್ದು ಮಾಡುತ್ತಿರುವ 'ದೇವ್ರಂತ ಮನುಷ್ಯ' ಪ್ರಥಮ್ ಅಭಿನಯಿಸುತ್ತಿರುವ ಸಿನಿಮಾ. ಚಿತ್ರಕ್ಕೆ ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಸಾಥ್ ನೀಡಿದ್ದಾರೆ. ಧ್ರುವಾ ಏನಾದ್ರೂ ಪ್ರಥಮ್ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎಂದುಕೊಳ್ಳಬೇಡಿ.
'ದೇವ್ರಂತ ಮನುಷ್ಯ' ಚಿತ್ರಕ್ಕೆ ಧ್ರುವಾ ಸಾಥ್...ಸಿನಿಮಾದಲ್ಲಿ ನಟಿಸ್ತಿದ್ದಾರಾ ಆ್ಯಕ್ಷನ್ ಪ್ರಿನ್ಸ್...? - ದೇವ್ರಂಥ ಮನುಷ್ಯ ಚಿತ್ರಕ್ಕೆ ಧ್ವನಿ ನೀಡಿದ ಧ್ರುವಾ
ಬಹಳಷ್ಟು ವಿಶೇಷತೆಯಿಂದ ಕೂಡಿರುವ ನಟ ಭಯಂಕರ ಸಿನಿಮಾ ತಂಡದೊಂದಿಗೆ ಆ್ಯಕ್ಷನ್ ಪ್ರಿನ್ಸ್ ಸೇರ್ಪಡೆಯಾಗಿದ್ದಾರೆ. ಆದರೆ ಚಿತ್ರದಲ್ಲಿ ಧ್ರುವಾ ಸರ್ಜಾ ಬಣ್ಣ ಹಚ್ಚಿಲ್ಲ . ಬದಲಿಗೆ ಪ್ರಥಮ್ ನಿರ್ದೇಶನ ಹಾಗೂ ನಟನೆಯ ಈ ಚಿತ್ರಕ್ಕೆ ಧ್ರುವಾ ಸರ್ಜಾ ಹಿನ್ನೆಲೆ ಧ್ವನಿ ನೀಡಿದ್ದಾರೆ.
ಬಹಳಷ್ಟು ವಿಶೇಷತೆಯಿಂದ ಕೂಡಿರುವ ನಟ ಭಯಂಕರ ಸಿನಿಮಾ ತಂಡದೊಂದಿಗೆ ಆ್ಯಕ್ಷನ್ ಪ್ರಿನ್ಸ್ ಸೇರ್ಪಡೆಯಾಗಿದ್ದಾರೆ. ಆದರೆ ಚಿತ್ರದಲ್ಲಿ ಧ್ರುವಾ ಸರ್ಜಾ ಬಣ್ಣ ಹಚ್ಚಿಲ್ಲ . ಬದಲಿಗೆ ಪ್ರಥಮ್ ನಿರ್ದೇಶನ ಹಾಗೂ ನಟನೆಯ ಈ ಚಿತ್ರಕ್ಕೆ ಧ್ರುವಾ ಸರ್ಜಾ ಹಿನ್ನೆಲೆ ಧ್ವನಿ ನೀಡಿದ್ದಾರೆ. ಧ್ರುವಾ ಸರ್ಜಾ ಜೊತೆ ಪ್ರಥಮ್ಗೆ ಒಳ್ಳೆ ಬಾಂಧವ್ಯವಿರುವ ಕಾರಣ ಧ್ರುವಾ, ಪ್ರಥಮ್ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ವಿಶೇಷ ಎಂದರೆ ಈ ಚಿತ್ರಕ್ಕೆ ಧ್ವನಿ ನೀಡಲು ಪೊಗರು ಹುಡುಗ ಯಾವುದೇ ಸಂಭಾವನೆ ತೆಗೆದುಕೊಂಡಿಲ್ಲವಂತೆ. ಆದರೆ ಧ್ರುವಾ ಸರ್ಜಾ ಬೇಡ ಎಂದ ಸಂಭಾವನೆಯನ್ನು ಬೇಸಿಗೆಯ ತಾಪಕ್ಕೆ ಬಳಲುತ್ತಿರುವ ಗೋವುಗಳ ಮೇವಿಗಾಗಿ ಗೋಶಾಲೆಗೆ ನೀಡುತ್ತಿರುವುದಾಗಿ ನಟ, ನಿರ್ದೇಶಕ ಪ್ರಥಮ್ ತಿಳಿಸಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು, ಸದ್ಯದಲ್ಲೇ ಚಿತ್ರದ ಆಡಿಯೋ ಕೂಡಾ ಬಿಡುಗಡೆ ಆಗಲಿದೆ.