ಎ.ಪಿ.ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇನ್ನು ಅರ್ಜುನ್ ಅವರ ‘ಅದ್ದೂರಿ’ ಸಿನಿಮಾದಿಂದ ಸ್ಯಾಂಡಲ್ವುಡ್ನಲ್ಲಿ ಬ್ರೇಕ್ ಪಡೆದ ನಟ ಧ್ರುವಾ ಸರ್ಜಾ ಇದೀಗ ಅರ್ಜುನ್ ನಿರ್ದೇಶನದ 'ಕಿಸ್' ಚಿತ್ರಕ್ಕೆ ತಮ್ಮ ಧ್ವನಿ ನೀಡಿದ್ದಾರೆ.
ಅರ್ಜುನ್ ನಿರ್ದೇಶನದ 'ಕಿಸ್' ಚಿತ್ರಕ್ಕೆ ಧ್ವನಿ ನೀಡಿದ ಆ್ಯಕ್ಷನ್ ಪ್ರಿನ್ಸ್ - ಡಾರ್ಜಿಲಿಂಗ್
ವಿರಾಟ್ ಹಾಗೂ ಶ್ರೀಲೀಲಾ ಪ್ರೇಮಿಗಳಾಗಿ ನಟಿಸಿರುವ 'ಕಿಸ್' ಚಿತ್ರಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಧ್ವನಿ ನೀಡಿದ್ದಾರೆ. ಎ.ಪಿ. ಅರ್ಜುನ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಚಿತ್ರಕ್ಕೆ ಪುನೀತ್ ರಾಜ್ಕುಮಾರ್ ಕೂಡಾ ಒಂದು ಹಾಡು ಹಾಡಿದ್ದಾರೆ.
ಚಿತ್ರರಂಗಕ್ಕೆ ಬಂದಾಗ ನಾನೂ ಕೂಡಾ ಹೊಸಬ. ಹೊಸಬರನ್ನೇ ಮುಂಚೂಣಿಯಲ್ಲಿ ಇಟ್ಟುಕೊಂಡು ಸಿನಿಮಾ ಮಾಡಿ ನನ್ನನ್ನು ಹೇಗೆ ಜನರಿಗೆ ಪರಿಚಯಿಸಿದರೋ ಹಾಗೆ ಈಗ ಹೊಸ ನಾಯಕ ಹಾಗೂ ನಾಯಕಿಯನ್ನು ‘ಕಿಸ್’ ಚಿತ್ರದ ಮೂಲಕ ಪರಿಚಯಿಸುತ್ತಿದ್ದೀರಾ. ನಿಮ್ಮ ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಚಿತ್ರದ ಮತ್ತೊಂದು ವಿಶೇಷವೆಂದರೆ ನಿರ್ದೇಶಕ ಅರ್ಜುನ್ ಅವರೇ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿರುವ 'ಅವನು ಬೆಟ್ಟೇಗೌಡ..ಇವಳು ಚಿಕ್ಕಬೋರಮ್ಮ' ಹಾಡು ಹೊಸ ದಾಖಲೆ ಬರೆಯಲು ಮುಂದಾಗಿದೆ.
ಬೆಂಗಳೂರು, ಗೋವಾ, ಡಾರ್ಜಿಲಿಂಗ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿರಾಟ್ ಹಾಗೂ ಶ್ರೀಲೀಲಾ ‘ಕಿಸ್’ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. KISS ಎಂದರೆ keep it simple and short ಎಂದು ಅರ್ಥವಂತೆ. 'ಕಿಸ್'...ತುಂಟ ತುಟಿಗಳ ಆಟೋಗ್ರಾಫ್ ಎಂಬ ಅಡಿ ಬರಹ ಇರುವ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ, ಗಿರೀಶ್ ಗೌಡ ಛಾಯಾಗ್ರಹಣ, ಡಾ. ಕೆ. ರವಿವರ್ಮ ಅವರ ಸಾಹಸ, ದೀಪು ಎಸ್. ಕುಮಾರ್ ಸಂಕಲನ, ರವಿವರ್ಮ ಸಾಹಸ, ಇಮ್ರಾನ್ ಸರ್ದಾರಿಯ ನೃತ್ಯ, ರವಿ ಸಂತೆಹಕ್ಲು ಸಂಭಾಷಣೆ ಇದೆ.