ರ್‍ಯಾಂಬೋ ಶರಣ್ ಹಾಗೂ ತುಪ್ಪದ ಹುಡುಗಿ ರಾಗಿಣಿ ಅಭಿನಯದ 'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾ ನಿನ್ನೆ ರಾಜ್ಯಾದ್ಯಂತ ಸುಮಾರು 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಟೈಟಲ್, ಪೋಸ್ಟರ್, ಹಾಡುಗಳಿಂದಲೇ ಸಖತ್ ಸದ್ದು ಮಾಡಿದ್ದ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ.
'ಅಧ್ಯಕ್ಷ ಇನ್ ಅಮೆರಿಕ' ಚಿತ್ರ ನೋಡಿದ ಧ್ರುವಾ ಸರ್ಜಾ 'ಫಸ್ಟ್ ಡೇ ಫಸ್ಟ್ ಶೋ' ನೋಡಿದ ಶರಣ್, ರಾಗಿಣಿ ಅಭಿಮಾನಿಗಳಂತೂ ಇಬ್ಬರ ಕಾಂಬಿನೇಶನ್ಗೆ ಪುಲ್ ಫಿದಾ ಆಗಿದ್ದಾರೆ. ಶರಣ್, ರಾಗಿಣಿ, ಹಾಸ್ಯನಟ ತಬಲಾ ನಾಣಿ, ನಿರ್ದೇಶಕ ಯೋಗಾನಂದ್ ಮುದ್ದಾನ್, ಆ್ಯಕ್ಷನ್ ಪ್ರಿನ್ಸ್ ಧ್ರುವಾಸರ್ಜಾ ಅನುಪಮಾ ಚಿತ್ರಮಂದಿರದಲ್ಲಿ ಒಟ್ಟಿಗೆ ಕುಳಿತು ಸಿನಿಮಾ ನೋಡಿದ್ದಾರೆ.
ಹಿಂದಿನ ಚಿತ್ರಗಳ ಸೋಲಿನಿಂದ ಕಂಗೆಟ್ಟಿದ್ದ ರಾಗಿಣಿಗೆ ಈ ಚಿತ್ರ ಬ್ರೇಕ್ ನೀಡಿದೆ ಎನ್ನಬಹುದು. ಅಲ್ಲದೆ ಶರಣ್ ರ್‍ಯಾಂಬೋ 2 ,ವಿಕ್ಟರಿ 2 ನಂತರ ಈ ಚಿತ್ರ ಕೂಡಾ ಮೋಡಿ ಮಾಡಿದ್ದು ಹ್ಯಾಟ್ರಿಕ್ ಬಾರಿಸುವುದು ಪಕ್ಕಾ ಅಂತಿದ್ದಾರೆ ಗಾಂಧಿನಗರ ಪಂಡಿತರು.
ಮಾಧ್ಯಮಗಳೊಂದಿಗೆ ಮಾತನಾಡಿದ ಧ್ರುವಾಸರ್ಜಾ, ಚಿತ್ರದಲ್ಲಿ ಎಲ್ಲೂ ವಲ್ಗಾರಿಟಿ ಅನ್ನೋದು ಇಲ್ಲ. ಮೊದಲಾರ್ಧವಂತೂ ಹೇಗೆ ಕಳೆಯುತ್ತೆ ಎಂಬುದು ತಿಳಿಯಲಿಲ್ಲ. ರಾಗಿಣಿ ಹಾಗೂ ಶರಣ್ ಚೆನ್ನಾಗಿ ಅಭಿನಯಿಸಿದ್ದಾರೆ. ಇದು ಫ್ಯಾಮಿಲಿಯೊಂದಿಗೆ ಕುಳಿತು ನೋಡಬಹುದಾದಂತ ಸಿನಿಮಾ. ಎಲ್ಲರೂ ಥಿಯೇಟರ್ಗೆ ಬಂದು ಸಿನಿಮಾ ನೋಡಿ ಎಂದು ಧ್ರುವಾ ಮನವಿ ಮಾಡಿದರು.