ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​​​ವುಡ್​​ ಧೀರ ಸಾಮ್ರಾಟನಿಗೆ ಸಾಥ್ ನೀಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ... - ನವ ನಟ ರಾಕೇಶ್

ಸ್ಯಾಂಡಲ್​ವುಡ್​ನಲ್ಲಿ ಈಗಾಗಲೇ ಸಾಕಷ್ಟು ಚಿತ್ರಗಳು ಸಿನಿಪ್ರಿಯರಿಂದ ಮೆಚ್ಚುಗೆಯನ್ನು ಪಡೆದು ನಿರ್ಮಾಪಕರ ಜೇಬು ತುಂಬಿಸಿವೆ. ಇದೀಗ ‘ಧೀರ ಸಾಮ್ರಾಟ್’ ಅನ್ನೋ ಪವರ್ ಫುಲ್ ಸಸ್ಪೆನ್ಸ್ ಸಿನಿಮಾ ಕೂಡ ಸಿದ್ಧವಾಗ್ತಿದ್ದು ಇಂದು ಚಿತ್ರ ಅದ್ದೂರಿಯಾಗಿ ಸೆಟ್ಟೇರಿದ್ದು,ಧೀರ ಸಾಮ್ರಾಟ ಚಿತ್ರಕ್ಕೆ ಅಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.

action-prince-dhruva-sarja-action-cut-for-sandal-wood-dheera-samrata
ಸ್ಯಾಂಡಲ್​​​ವುಡ್​​ ಧೀರ ಸಾಮ್ರಾಟನಿಗೆ ಸಾಥ್ ನೀಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ...

By

Published : Jan 31, 2020, 5:53 AM IST

ಸ್ಯಾಂಡಲ್​ವುಡ್​ನಲ್ಲಿ ಈಗಾಗಲೇ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಬಂದಿವೆ. ಅಲ್ಲದೇ ಕೆಲವು ಚಿತ್ರಗಳು ಸಿನಿಪ್ರಿಯರಿಂದ ಮೆಚ್ಚುಗೆಯನ್ನು ಪಡೆದು ನಿರ್ಮಾಪಕರ ಜೇಬು ತುಂಬಿಸಿವೆ. ಇದೀಗ ‘ಧೀರ ಸಾಮ್ರಾಟ್’ ಅನ್ನೋ ಪವರ್ ಫುಲ್ ಸಸ್ಪೆನ್ಸ್ ಸಿನಿಮಾ ಕೂಡ ಸಿದ್ಧವಾಗ್ತಿದ್ದು, ಗುರುವಾರ ಚಿತ್ರ ಅದ್ದೂರಿಯಾಗಿ ಸೆಟ್ಟೇರಿದ್ದು,ಧೀರ ಸಾಮ್ರಾಟ ಚಿತ್ರಕ್ಕೆ ಅಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.

ಸ್ಯಾಂಡಲ್​​​ವುಡ್​​ ಧೀರ ಸಾಮ್ರಾಟನಿಗೆ ಸಾಥ್ ನೀಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ...

ಕುರುಬರಹಳ್ಳಿಯ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮಕ್ಕೆ ಆಗಮಿಸಿ ಚಾಲನೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನು ಈ ಚಿತ್ರವನ್ನು ಭರ್ಜರಿ ಚೇತನ್ ಗರಡಿಯಲ್ಲಿ ಪಳಗಿರೋ ಪವನ್ ಕುಮಾರ್ ನಿರ್ದೇಶನ ಮಾಡ್ತಿದ್ದಾರೆ.

ಸ್ಯಾಂಡಲ್​​​ವುಡ್​​ ಧೀರ ಸಾಮ್ರಾಟನಿಗೆ ಸಾಥ್ ನೀಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ನವ ನಟ ರಾಕೇಶ್, ನಾಯಕನಾಗಿ ನಟಿಸ್ತಿದ್ದು‘ಧೀರ ಸಾಮ್ರಾಟ’ನಾಗಿ ಸ್ಯಾಂಡಲ್​​​​ವುಡ್​​ಗೆ ಎಂಟ್ರಿ ಕೊಡುವುದಕ್ಕೆ ರೆಡಿಯಾಗ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಸುಳಿ, ಗಿರ್​ಗಟ್ಲೆ, ಫ್ಯಾನ್ ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿರೋ ಅದ್ವಿತಿ ಶೆಟ್ಟಿ ನಟಿಸಲಿದ್ದು, ಧೀರ ಸಾಮ್ರಾಟನಿಗೆ ಜೋಡಿಯಾಗಿ ಮಿಂಚಲು ರೆಡಿಯಾಗಿದ್ದಾರೆ.

ಸ್ಯಾಂಡಲ್​​​ವುಡ್​​ ಧೀರ ಸಾಮ್ರಾಟನಿಗೆ ಸಾಥ್ ನೀಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಇನ್ನು ಈ ಚಿತ್ರ ಅನೌನ್ಸ್ ಆಗಿ ತುಂಬಾನೇ ದಿನಗಳ ಕಳೆದಿದ್ದು, ಚಿತ್ರತಂಡ ಕೆಲವು ದಿನಗಳಿಂದ ಪ್ರಿಪ್ರೊಡಕ್ಷನ್ ವರ್ಕ್​ನ್ನು ಕಂಪ್ಲೀಟ್ ಮಾಡಿಕೊಂಡಿದೆ. ಗುರುವಾರ ಮುಹೂರ್ತ ಮುಗಿಸಿಕೊಂಡಿದೆ. ಚಿತ್ರತಂಡ ಮುಂದಿನ ತಿಂಗಳಿನಿಂದ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

ABOUT THE AUTHOR

...view details