ಕರ್ನಾಟಕ

karnataka

ETV Bharat / sitara

ಬ್ಯುಸಿ ಕೆಲಸಗಳ ನಡುವೆಯೂ ಅಮ್ಮನಿಗೆ ಗಿಫ್ಟ್​​ ನೀಡಿ ಬರ್ತಡೇ ಆಚರಿಸಿದ ಆ್ಯಕ್ಷನ್​ ಕಿಂಗ್​​ - undefined

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ತಮ್ಮ ತಾಯಿ ಹಾಗೂ ಪತ್ನಿ ಬರ್ತಡೇ ಆಚರಿಸಿದ್ದಾರೆ. ತಾಯಿಗೆ ಉಂಗುರವನ್ನು ತೊಡಿಸಿ ಬರ್ತಡೇ ವಿಶ್ ಮಾಡಿದ್ದಾರೆ.

ತಾಯಿ ಲಕ್ಷ್ಮಿದೇವಿ ಜೊತೆ ಅರ್ಜುನ್​​​ಸರ್ಜಾ

By

Published : Apr 15, 2019, 12:20 PM IST

ಸೆಲಬ್ರಿಟಿಗಳು ತಮ್ಮ ಬ್ಯುಸಿ ಕೆಲಸದ ನಡುವೆಯೂ ಕುಟುಂಬದೊಂದಿಗೆ ಕಾಲ ಕಳೆಯುವುದು ಬಹಳ ಅಪರೂಪ. ಅದರಲ್ಲೂ ಹಬ್ಬ ಹರಿದಿನ, ಕುಟುಂಬಸ್ಥರ ಹುಟ್ಟುಹಬ್ಬದ ವೇಳೆ ಅವರೊಂದಿಗೆ ಇದ್ದು ಬರ್ತಡೇ ಆಚರಿಸುವುದು ಎಂದರೆ ಅದು ನಿಜಕ್ಕೂ ವಿಶೇಷ.

ಅಮ್ಮನಿಗೆ ಬರ್ತಡೇ ಗಿಫ್ಟ್​ ನೀಡುತ್ತಿರುವ ಅರ್ಜುನ್​​​​​​
ಧ್ರುವಸರ್ಜಾ ಕುಟುಂಬ

ದಕ್ಷಿಣ ಭಾರತದ ಸ್ಟಾರ್​, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಯಾವಾಗಲೂ ಬ್ಯುಸಿ ಇರುವ ನಟ. ಸದ್ಯಕ್ಕೆ ಅರ್ಜುನ್​ ರಾಧಿಕಾ ಜೊತೆ 'ಕಾಂಟ್ರಾಕ್ಟ್​​​​' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಕೆಲಸಗಳ ನಡುವೆಯೂ ಅರ್ಜುನ್ ನಿನ್ನೆ ತಮ್ಮ ತಾಯಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅಷ್ಟೇ ಅಲ್ಲ ತಾಯಿಗೆ ಉಂಗುರವನ್ನು ಕೂಡಾ ಗಿಫ್ಟ್ ಮಾಡಿದ್ದಾರೆ. ಅರ್ಜುನ್ ತಾಯಿ ಲಕ್ಷ್ಮಿದೇವಿ ಧ್ರುವಸರ್ಜಾ ಕುಟುಂಬದೊಂದಿಗೆ ನೆಲೆಸಿದ್ದು, ಅಲ್ಲಿಗೆ ತೆರಳಿದ್ದ ಅರ್ಜುನ್ ತಾಯಿಗೆ ಹುಟ್ಟುಹಬ್ಬದ ವಿಶ್ ಮಾಡಿ ಉಂಗುರವನ್ನು ಅಮ್ಮನ ಕೈ ಬೆರಳಿಗೆ ತೊಡಿಸಿದ್ದಾರೆ.

ಅಕ್ಕ, ಭಾವ, ಅಮ್ಮನೊಂದಿಗೆ ಅರ್ಜುನ್​​​​
ಪತ್ನಿ, ಮಕ್ಕಳೊಂದಿಗೆ ಆ್ಯಕ್ಷನ್ ಕಿಂಗ್​​​

ಇನ್ನು ವಿಶೇಷ ಎಂದರೆ ನಿನ್ನೆ ಅರ್ಜುನ್ ಪತ್ನಿ ಆಶಾರಾಣಿ ಬರ್ತಡೇ ಕೂಡಾ. ಪತ್ನಿ ಆಶಾರಾಣಿ, ಮಕ್ಕಳಾದ ಐಶ್ವರ್ಯ ಅರ್ಜುನ್ ಹಾಗೂ ಅಂಜನಾ ಅರ್ಜುನ್ ಅವರನ್ನು ರೆಸ್ಟೋರೆಂಟ್​​ಗೆ ಕರೆದೊಯ್ದು ಅವರೊಂದಿಗೆ ಊಟ ಮಾಡಿ ಬರ್ತಡೇ ಆಚರಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details