ಕರ್ನಾಟಕ

karnataka

ETV Bharat / sitara

ಪುನೀತ್ ಸಾರ್ ಜೊತೆ ನಟಿಸುವ ಆಸೆ ಹಾಗೆಯೇ ಉಳಿಯಿತು: ಸೌತ್ ನಟಿ ಪೂರ್ಣ ಬೇಸರ - '100' ಚಿತ್ರ

ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ಜೊತೆ ನಟಿಸಬೇಕೆಂದು ಆಸೆ ಪಟ್ಟಿದ್ರಂತೆ. ಆದರೆ, ಆಸೆ ಹಾಗೆಯೇ ಉಳಿಯಿತು. ಆ ಸ್ಮೈಲ್, ಅವರ ಸಿಂಪ್ಲಿಸಿಟಿಯನ್ನ ಮರೆಯೋದಿಕ್ಕೆ ಆಗೋಲ್ಲ ಅಂತಾ ನಟಿ ಪೂರ್ಣ ಭಾವುಕರಾದರು.

Actress Poorna
Actress Poorna

By

Published : Nov 19, 2021, 2:25 PM IST

ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಸಿನಿಮಾಗಳಲ್ಲಿ ಅಭಿನಯದ ಜೊತೆಗೆ ಗ್ಲ್ಯಾಮರ್​​ನಿಂದಲೇ ಬೇಡಿಕೆ ಹೊಂದಿರುವ ನಟಿ ಪೂರ್ಣ (Actress Poorna). ಇತ್ತೀಚೆಗೆ ಬಿಡುಗಡೆಯಾದ 'ತಲೈವಿ' ಸಿನಿಮಾದಲ್ಲಿ ಗಮನ ಸೆಳೆದಿದ್ದ ಪೂರ್ಣ, ಬಹಳ ವರ್ಷಗಳ ಬಳಿಕ ಮತ್ತೆ ಕನ್ನಡದ ಕಡೆ ಮುಖ ಮಾಡಿದ್ದಾರೆ.

ಸೂರ್ಯ, ಮೋಹನ್ ಲಾಲ್, ಆರ್ಯ, ನಂದಮುರಿ ಬಾಲಕೃಷ್ಣ ಸೇರಿದಂತೆ ಸೌತ್ ಸ್ಟಾರ್​​ಗಳ ಜೊತೆ ಸ್ಕ್ರೀನ್ ಹಂಚಿಕೊಂಡಿರುವ ಪೂರ್ಣ, ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ಜೊತೆ ನಟಿಸಬೇಕೆಂದು ಆಸೆ ಪಟ್ಟಿದ್ದಂತೆ.

ಆದರೆ, ಆಸೆ ಹಾಗೆಯೇ ಉಳಿಯಿತು (Acting with Puneeth sir will remain as a desire). ಪುನೀತ್ ಸಾರ್ ಅಗಲಿಕೆಯಿಂದ ಚಿತ್ರರಂಗಕ್ಕೆ ದೊಡ್ಡ ಲಾಸ್. ಐ ಲವ್ ಯೂ ಪುನೀತ್ ಸಾರ್. ಸೈಮಾ ಅವಾರ್ಡ್ ಟೈಮಲ್ಲಿ ನಾನು ಪುನೀತ್ ಸಾರ್​ ಅವರನ್ನು ಭೇಟಿ ಮಾಡಿದ್ದೇನೆ, ಆ ಸ್ಮೈಲ್, ಅವರ ಸಿಂಪ್ಲಿಸಿಟಿಯನ್ನ ಮರೆಯೋದಿಕ್ಕೆ ಆಗೋಲ್ಲ ಅಂತಾ ಪೂರ್ಣ ಭಾವುಕರಾದರು.

'100' ಸಿನಿಮಾ ಪೋಸ್ಟರ್​​

'ಜೋಶ್' ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಗೆ (Josh Kannada Movie) ಎಂಟ್ರಿ ಕೊಟ್ಟಿದ ಪೂರ್ಣ, 'ರಾಧನ ಗಂಡ' ಸಿನಿಮಾ ಆದ್ಮಲೇ ಈಗ '100' ಚಿತ್ರದ ಮೂಲಕ (100 Kannada Movie) ಸ್ಯಾಂಡಲ್​ವುಡ್​ಗೆ ಬಂದಿದ್ದಾರೆ. ನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ '100' ಸಿನಿಮಾದಲ್ಲಿ ಪೂರ್ಣ ನಟಿಸಿದ್ದು, ತಮ್ಮ ಪಾತ್ರದ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದಾರೆ.

ಇಂದು ರಾಜ್ಯಾದ್ಯಾಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಈ ಸಿನಿಮಾ, ಸೈಬರ್ ಕ್ರೈಮ್ ಹಾಗೂ ಥ್ರಿಲ್ಲರ್ ಆಧಾರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಪತ್ನಿ ಪಾತ್ರದಲ್ಲಿ ಪೂರ್ಣ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ ನಿವಾಸಕ್ಕೆ ಶ್ರೀಶೈಲ ಶ್ರೀಗಳ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

ಈ ಬಗ್ಗೆ ಮಾತನಾಡಿದ ಪೂರ್ಣ, ಈ ಚಿತ್ರದಲ್ಲಿ ನನ್ನದು ಫ್ಲ್ಯಾಶ್ ಬ್ಯಾಕ್​​ನಲ್ಲಿ ಬರುವ ಪಾತ್ರ. ಈ ಕ್ಯಾರೆಕ್ಟರ್ ಅನ್ನ ರಮೇಶ್ ಸಾರ್ ಬಹಳ ಚೆನ್ನಾಗಿ ಡೈರೆಕ್ಟ್ ಮಾಡಿದ್ದಾರೆ. ನನಗೆ ಈ ಪಾತ್ರ ಮಾಡಬೇಕಾದರೆ ಸ್ವಲ್ಪ ಭಾಷೆ ಸಮಸ್ಯೆ ಆಗುತ್ತಿತ್ತು. ಆಗ ರಮೇಶ್ ಸಾರ್ ಬಹಳ ಚೆನ್ನಾಗಿ ಹೇಳಿ ಕೊಟ್ಟರು. ಇನ್ನು ಇದು ಪ್ರತಿಯೊಬ್ಬ ಹೆಣ್ಣು ಮಕ್ಕಳು ನೋಡಲೆಬೇಕಾದ ಸಿನಿಮಾ. ಮೊಬೈಲ್​​ನಿಂದ ಏನೆಲ್ಲ ತೊಂದರೆಗಳು ಆಗುತ್ತೆ ಅನ್ನೋದನ್ನ 100 ಸಿನಿಮಾದಲ್ಲಿ ತೋರಿಸಲಾಗಿದೆ ಅಂದರು.

ನಟಿ ಪೂರ್ಣ

ಇಬ್ಬರು ಹೀರೋಯಿನ್ ಇದ್ದ ಸಿನಿಮಾಗಳಲ್ಲಿ ಹೊಂದಾಣಿಕೆ ಇರೋಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, '100' ಸಿನಿಮಾದಲ್ಲಿ ನನ್ನ ಹಾಗೂ ರಚಿತಾ ರಾಮ್ ಕಾಂಬಿನೇಷನ್ ಬಹಳ ಚೆನ್ನಾಗಿ ವರ್ಕ್ ಆಗಿದೆ. ಅದಕ್ಕೆ ಸಾಕ್ಷಿ ನಾವಿಬ್ಬರು ಆನ್ ಸ್ಕ್ತೀನ್ ನಲ್ಲಿ ಚೆನ್ನಾಗಿ ಕಾಣ್ತಾ ಇರೋದು. ಇನ್ನು ರಚಿತಾ ರಾಮ್ ನನಗೆ ಕನ್ನಡ ಹೇಳಿ ಕೊಟ್ಟರು. ಹಾಗೇ ರಚಿತಾ ರಾಮ್ ಸ್ಟಾರ್ ನಟಿ ಎಂಬ ಯಾವುದೇ ಅಹಂ ಅವರಲ್ಲಿ ನಾನು ನೋಡಲಿಲ್ಲ ಅಂತಾ ರಚ್ಚು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಕನ್ನಡದಲ್ಲಿ ಒಳ್ಳೆ ಕಥೆಗಳ ಸಿಕ್ಕರೆ, ಅದರಲ್ಲಿಯೂ ಸೌಂದರ್ಯ ಮೇಡಂ ಥರ ಸೀರೆಯಲ್ಲಿ ಅಭಿನಯಿಸುವ ಪಾತ್ರಗಳು ಬಂದರೆ ಕನ್ನಡದಲ್ಲಿ ಸಿನಿಮಾಗಳನ್ನ ಮಾಡ್ತೀನಿ ಎಂದು ಪೂರ್ಣ ಹೇಳಿದರು.

ABOUT THE AUTHOR

...view details