ಕರ್ನಾಟಕ

karnataka

ETV Bharat / sitara

ಅಪ್ಪು ಅಗಲಿಕೆಯ ನೋವಿನಲ್ಲೇ ಭಜರಂಗಿ-2 ಚಿತ್ರತಂಡದ ಬೆಂಬಲಕ್ಕೆ ನಿಂತ ಶಿವಣ್ಣ.. - ಭಜರಂಗಿ-2 ಸಿನೆಮಾ ವೀಕ್ಷಿಸಿದ ಶಿವರಾಜ್​ಕುಮಾರ್​

ಗಾಂಧಿನಗರದ ಅನುಪಮಾ ಚಿತ್ರಮಂದಿರಕ್ಕೆ ನಟ ಶಿವರಾಜ್​ಕುಮಾರ್ (Actor Shivaraj kumar) ಆಗಮಿಸಿದ್ದರು. ಸಿನಿಮಾ ಪ್ರಾರಂಭಕ್ಕೂ ಮುನ್ನ ಅಭಿಮಾನಿಗಳು ಶಿವಣ್ಣ​ ಮತ್ತು ಅಪ್ಪು ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ರೇ ರೇ ಭಜರಂಗಿ ಹಾಡು ಹಾಡಿದ ಹ್ಯಾಟ್ರಿಕ್ ಹೀರೋ ಅಭಿಮಾನಿಗಳಿಗೆ ಸಾಥ್ ನೀಡಿದರು.

acter-shivaraj-kumar-watched-bajarangi-2-movie-with-fans
ಭಜರಂಗಿ-2 ಚಿತ್ರತಂಡದ ಬೆಂಬಲಕ್ಕೆ ನಿಂತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

By

Published : Nov 14, 2021, 6:11 PM IST

ಬೆಂಗಳೂರು:ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇಂದು ಪ್ರೇಕ್ಷಕರ ಜೊತೆ ಕುಳಿತು ಭಜರಂಗಿ-2 (Bajarangi-2 movie) ಚಿತ್ರವನ್ನು ವೀಕ್ಷಿಸಿದರು. ಈ ಮೂಲಕ ಚಿತ್ರತಂಡದ ಬೆಂಬಲಕ್ಕೆ ನಿಂತು ಪ್ರಚಾರಕ್ಕೆ ಮುಂದಾದರು.

ಭಜರಂಗಿ-2 ಚಿತ್ರತಂಡದ ಬೆಂಬಲಕ್ಕೆ ನಿಂತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಗಾಂಧಿನಗರದ ಅನುಪಮಾ ಚಿತ್ರಮಂದಿರಕ್ಕೆ ನಟ ಶಿವರಾಜ್​ಕುಮಾರ್ ಆಗಮಿಸಿದ್ದರು. ಸಿನಿಮಾ ಪ್ರಾರಂಭಕ್ಕೂ ಮುನ್ನ ಅಭಿಮಾನಿಗಳು ಅಪ್ಪು ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ರೇ ರೇ ಭಜರಂಗಿ ಹಾಡು ಹಾಡಿದ ಹ್ಯಾಟ್ರಿಕ್ ಹೀರೋ ಅಭಿಮಾನಿಗಳಿಗೆ ಸಾಥ್ ನೀಡಿದರು.

ಅಕ್ಟೋಬರ್ 29 ರಂದು ದೇಶಾದ್ಯಂತ ಭಜರಂಗಿ-2 ಚಿತ್ರ ಬಿಡುಗಡೆಯಾಗಿತ್ತು. ಆದರೆ, ಅಂದು ಪುನೀತ್ ರಾಜ್​ಕುಮಾರ್​ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಹಿನ್ನೆಲೆ ಪ್ರದರ್ಶನವನ್ನು ರದ್ದು ಮಾಡಲಾಗಿತ್ತು. ನಂತರ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರದ ಕಡೆಗೆ ಮುಖ ಮಾಡಿರಲಿಲ್ಲ. ಹೀಗಾಗಿ, ಚಿತ್ರಕ್ಕೆ ಹಿನ್ನಡೆಯುಂಟಾಗಿತ್ತು. ಈಗ ಅಪ್ಪು ಅಗಲಿಕೆ ನೋವಿನಲ್ಲೇ ಶಿವಣ್ಣ ಚಿತ್ರ ತಂಡದ ಬೆಂಬಲಕ್ಕೆ ನಿಂತಿದ್ದು, ಚಿತ್ರದ ಪ್ರಚಾರ ಮಾಡಲು ಮುಂದಾಗಿದ್ದಾರೆ.

ಓದಿ:Dr 56: ಸಖತ್​​ ಸದ್ದು ಮಾಡ್ತಿದೆ ಪ್ರಿಯಾಮಣಿ ನಟನೆಯ 'ಡಾ 56' ಚಿತ್ರದ ಟೀಸರ್​​

ABOUT THE AUTHOR

...view details