ಮೆಗಾಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಚಿತ್ರದ ಟೀಸರ್ ರಿಲೀಸ್ ಆಗಿದೆ. ಚಿತ್ರತಂಡ ಹೇಳಿದ ರೀತಿಯಲ್ಲಿಯೇ ಜನವರಿ 29ರ ಸಂಜೆ 4.05ಕ್ಕೆ ಟೀಸರ್ ರಿಲೀಸ್ ಆಗಿದೆ.
'ಆಚಾರ್ಯ' ಟೀಸರ್ ರಿಲೀಸ್ ಅದ್ಭುತವಾಗಿ ಮೂಡಿ ಬಂದಿರುವ ಟೀಸರ್ನಲ್ಲಿ ಚಿರಂಜೀವಿ ಲುಕ್ ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಅನ್ನಿಸುತ್ತಿದೆ. ಸಮುದಾಯವೊಂದರ ರಕ್ಷಣೆ ಮಾಡುವ ಕೆಲಸವನ್ನು ಆಚಾರ್ಯ ಮಾಡುತ್ತಾನೆ ಎಂಬುದು ಟೀಸರ್ ನೋಡಿದ್ರೆ ತಿಳಿಯುತ್ತದೆ.
'ಆಚಾರ್ಯ' ಟೀಸರ್ ರಿಲೀಸ್ ಇದನ್ನೂ ಓದಿ : ಸಲಾರ್ ಶೂಟಿಂಗ್ ಸ್ಟಾರ್ಟ್.. ಪ್ರಭಾಸ್ ಫೋಟೋ ವೈರಲ್..
ಹಿನ್ನೆಲೆ ಧ್ವನಿಯಲ್ಲಿ ರಾಮ್ಚರಣ್ ಧ್ವನಿ ಕೇಳಿದ್ದು, ಅದ್ರಲ್ಲಿ ಇತರರಿಗಾಗಿ ಬದುಕುವವರು ದೇವರಿಗೆ ಸಮಾನರು. ಅವರ ಜೀವಗಳೇ ಅಪಾಯದಲ್ಲಿದ್ದರೆ ದೇವರು ಬಂದು ಅವರನ್ನು ರಕ್ಷಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅಂದ್ರೆ ಅಂತವರನ್ನು ರಕ್ಷಿಸಲು ಆಚಾರ್ಯ ಬರ್ತಾನೆ ಎಂದು ಹೇಳಲಾಗಿದೆ.
ಟೀಸರ್ನಲ್ಲಿ ಕಾಣುವ ಹಾಗೆ ಯಾವುದೋ ಒಂದು ಸಮುದಾಯದ ಜನ ಸಂಕಷ್ಟದಲ್ಲಿರುತ್ತಾರೆ. ಅವರನ್ನು ಕಾಪಾಡಲು ಆಚಾರ್ಯ ಟೊಂಕ ಕಟ್ಟಿ ನಿಂತು ಅವರಿಗೆ ಸಹಾಯ ಮಾಡುತ್ತಾನೆ ಎಂಬುದು ಗೊತ್ತಾಗುತ್ತದೆ.
ಹಿನ್ನೆಲೆ ಧ್ವನಿಯಲ್ಲಿ ನಾನು ಯಾರಿಗೂ ಪಾಠ ಮಾಡಲ್ಲ. ಆದ್ರೂ ನನ್ನ ಆಚಾರ್ಯ ಅಂತಾರೆ. ಯಾಕಂದ್ರೆ ನಾನು ನೀತಿ ಪಾಠ ಮಾಡುತ್ತೇನೆ ಎಂದಿದ್ದಾರೆ ಅಚಾರ್ಯ ಪಾತ್ರದ ಚಿರಂಜೀವಿ.
ಸಿನಿಮಾಕ್ಕೆ ನಿರ್ದೇಶಕ ಕೊರಟಾಲ ನಿರ್ದೇಶನವಿದ್ದು, ರಾಮ್ಚರಣ್ ಬಂಡವಾಳ ಹಾಕಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.