ಕರ್ನಾಟಕ

karnataka

ETV Bharat / sitara

'ನನ್ನರಸಿ ರಾಧೆ' ಇಂಚರಾಳ ಬಗ್ಗೆ ನಿಮಗೆಷ್ಟು ಗೊತ್ತು? - ನನ್ನರಸಿ ರಾಧೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸತಾಗಿ ಆರಂಭವಾಗಿರುವ 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ನಾಯಕಿ ಇಂಚರಾಳಾಗಿ ನಟಿಸುತ್ತಿರುವ ಮುದ್ದು ಮುಖದ ಸುಂದರಿಯ ಹೆಸರು ಕೌಸ್ತುಭಮಣಿ. ಬಿಕಾಂ ಪದವಿಧರೆಯಾಗಿರುವ ಈಕೆ ನಂತರ ಫ್ಯಾಷನ್ ಲೋಕದತ್ತ ಹೆಜ್ಜೆ ಹಾಕಿದರು.

about nannarasi radhe inchara
'ನನ್ನರಸಿ ರಾಧೆ'ಯ ಇಂಚರಾಳ ಬಗ್ಗೆ ನಿಮಗೆಷ್ಟು ಗೊತ್ತು?

By

Published : Feb 20, 2020, 4:48 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸತಾಗಿ ಆರಂಭವಾಗಿರುವ 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ನಾಯಕಿ ಇಂಚರಾಳಾಗಿ ನಟಿಸುತ್ತಿರುವ ಮುದ್ದು ಮುಖದ ಸುಂದರಿಯ ಹೆಸರು ಕೌಸ್ತುಭಮಣಿ. ಇದೇ ಮೊದಲ ಬಾರಿ ನಟನಾ ಲೋಕಕ್ಕೆ ಬಂದಿರುವ ಚೆಲುವೆ ಕೌಸ್ತುಭಮಣಿ ನಟನೆಯ ಮೂಲಕ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೌಸ್ತುಭಮಣಿ

ಬಿಕಾಂ ಪದವಿಧರೆಯಾಗಿರುವ ಈಕೆ ನಂತರ ಫ್ಯಾಷನ್ ಲೋಕದತ್ತ ಹೆಜ್ಜೆ ಹಾಕಿದರು. ನವತಾರೆ ಹೆಸರಿನ ಬ್ಯೂಟಿ ಪೇಜೆಂಟ್​ಗೆ ಹೋದ ಇವರ ಅದೃಷ್ಟ ಬದಲಾಯಿತು. ಅಲ್ಲಿ ಹೋದಾಗ ಆಡಿಶನ್​​ಗಳಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಬರುತ್ತಿರುವ ಹೊಸ ಧಾರಾವಾಹಿಯ ಆಡಿಶನ್​​ಗೆ ಹೋಗಿ ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಕೌಸ್ತುಭಮಣಿ
ಕೌಸ್ತುಭಮಣಿ

ನಟನೆಯ ರೀತಿ ನೀತಿಗಳು ತಿಳಿಯದಿದ್ದ, ಯಾವುದೇ ತರಬೇತಿ ಪಡೆಯದ ಈಕೆ ಇಂದು ಕಿರುತೆರೆ ಪ್ರಿಯರ ಪಾಲಿನ ಪ್ರೀತಿಯ ಇಂಚರ. "ಧಾರಾವಾಹಿಯ ನಿರ್ದೇಶಕ ವಿನೋದ್ ದೊಂಡಾಳೆ ನನ್ನನ್ನು ತಿದ್ದುತ್ತಿದ್ದಾರೆ. ಅವರಿಂದ ನಾನು ನಟನೆಯ ರೀತಿ ನೀತಿಗಳನ್ನು ಕಲಿಯುತ್ತಿದ್ದೇನೆ. ಆಕಸ್ಮಿಕವಾಗಿ ಈ ಕ್ಷೇತ್ರಕ್ಕೆ ಬಂದಿರುವ ನಾನು ಮೊದಲ ಧಾರಾವಾಹಿಯಲ್ಲೇ ಯಶಸ್ವಿಯಾಗಿದ್ದೇನೆ ಅಂತಾರೆ ಕೌಸ್ತುಭಮಣಿ.

ಕೌಸ್ತುಭಮಣಿ

ABOUT THE AUTHOR

...view details