ಕರ್ನಾಟಕ

karnataka

ETV Bharat / sitara

ಶಾರುಕ್​​​​ ನಿರ್ಮಾಣದ ಚಿತ್ರಕ್ಕೆ ಅಭಿಷೇಕ್​ ಬಚ್ಚನ್​​​ ಹೀರೋ - ಬೊಬ್​​ ಬಿಸ್ವಾನ್​​ನಲ್ಲಿ ಅಭಿಷೇಕ್​​ ಬಚ್ಚಸ್​​

'ಧೂಮ್​​ 3' ಸಿನಿಮಾ ನಾಯಕ ಅಭಿಷೇಕ್ ಬಚ್ಚನ್​​​​​ ರೆಡ್​ ಚಿಲ್ಲಿ ಎಂಟರ್​​ಟೈನ್​​ಮೆಂಟ್​​ ಸಂಸ್ಥೆ​​​ ನಿರ್ಮಾಣ ಮಾಡುತ್ತಿರುವ ಬೊಬ್​​​ ಬಿಸ್ವಾಸ್​​​ ಸಿನಿಮಾದಲ್ಲಿ ಲೀಡ್​ ರೋಲ್​ ಪ್ಲೇ ಮಾಡುತ್ತಿದ್ದಾರೆ.

ಶಾರುಕ್​ ಮತ್ತು​ ಅಭಿಷೇಕ್​​​​ ಬಚ್ಚನ್​

By

Published : Nov 25, 2019, 7:03 PM IST

ಬಾಲಿವುಡ್​​ ಬಿಗ್​ ಬಿ ಅಮಿತಾಬ್​ ಬಚ್ಚನ್​ ಪುತ್ರ ಅಭಿಷೇಕ್​ ಬಚ್ಚನ್​​​​ ಇದೀಗ ಸಿನಿಮಾವೊಂದರಲ್ಲಿ ನಟಿಸಲು ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. 'ಧೂಮ್​​ 3' ಸಿನಿಮಾ ನಾಯಕ ಅಭಿಷೇಕ್​​ ರೆಡ್​ ಚಿಲ್ಲಿ ಎಂಟರ್​​ಟೈನ್​​ಮೆಂಟ್​​ ಸಂಸ್ಥೆ​​​ ನಿರ್ಮಾಣ ಮಾಡುತ್ತಿರುವ ಬೊಬ್​​​ ಬಿಸ್ವಾಸ್​​ ಸಿನಿಮಾದಲ್ಲಿ ಲೀಡ್​ ರೋಲ್​ ಪ್ಲೇ ಮಾಡುತ್ತಿದ್ದಾರೆ.

ಈ ಸಿನಿಮಾಕ್ಕೆ ಶಾರುಕ್​ ಖಾನ್​ ಒಡೆತನದ ರೆಡ್​ ಚಿಲ್ಲಿ ಎಂಟರ್​​ಟೈನ್​​ಮೆಂಟ್​​ ಸಂಸ್ಥೆಯು ಬಂಡವಾಳ ಹೂಡುತ್ತಿದೆ. ಬೊಬ್​​​ ಬಿಸ್ವಾಸ್​​ ಸಿನಿಮಾಗೆ ಅನ್ನಪೂರ್ಣ ಘೋಶ್​​ ನಿರ್ದೇಶನವಿದ್ದು, ಶಾರುಕ್​ ಖಾನ್​ ಪತ್ನಿ ಗೌರಿ ಖಾನ್​, ಸುಜೋಯ್​​​ ಘೋಶ್​​ ಮತ್ತು ಗೌರವ್​​​​ ವರ್ಮ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ.

ಈ ಬಗ್ಗೆ ರೆಡ್​​ ಚಿಲ್ಲಿ ಎಂಟರ್​​ಟೈನ್​​ಮೆಂಟ್​​​ ಸಂಸ್ಥೆಯು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​​ವೊಂದನ್ನು ಮಾಡಿದ್ದು, ನಮಸ್ಕಾರ, ನಮ್ಮ ಮುಂದಿನ ಸಿನಿಮಾ ಬೊಬ್​​​​​ ಬಿಸ್ವಾಸ್​​​​​. ಈ ಸಿನಿಮಾಕ್ಕೆ ದಿಯಾ ಅನ್ನಪೂರ್ಣ ಘೋಶ್​​ ನಿರ್ದೇಶನ ಮಾಡುತ್ತಿದ್ದು, ಅಭಿಷೇಕ್​ ಬಚ್ಚನ್​​ ಲೀಡ್​​ ರೋಲ್​ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದೆ.

ಇನ್ನು ಈ ಹಿಂದೆ ಅಜಯ್​​ ದೇವಗನ್​​ ನಿರ್ಮಾಣ ಮಾಡಿರುವ 'ಬಿಗ್​​ ಬುಲ್'​​​ ಸಿನಿಮಾದಲ್ಲಿಯೂ ಅಭಿಷೇಕ್​​ ನಟಿಸಿದ್ದಾರೆ.

ABOUT THE AUTHOR

...view details