ಕರ್ನಾಟಕ

karnataka

ETV Bharat / sitara

ಅಮರ್​ ಚಿತ್ರಕ್ಕೆ ಅಭಿಷೇಕ್​​ ಅಂಬರೀಶ್​​ ಪಡೆದ ಸಂಭಾವನೆ ಎಷ್ಟು ಗೊತ್ತಾ? - ಅಮರ್ ಸಿನಿಮಾ ಅಭಿಷೇಕ್ ಪಡೆದಿರುವ ಸಂಭಾವನೆ ಎಷ್ಟು ಗೊತ್ತು

ಅಮರ್ ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ ಸ್ಯಾಂಡಲ್​ವುಡ್​ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ನಿರ್ಮಾಪಕ ಸಂದೇಶ್ ಆಪ್ತರು ಹೇಳುವ ಪ್ರಕಾರ ಅಭಿ ಮೊದಲ ಚಿತ್ರಕ್ಕೆ ಬರೋಬ್ಬರಿ 1 ಕೋಟಿ ರೂ. ಸಂಭಾವನೆ ಪಡೆದಿದ್ದಾರ‌ಂತೆ. ಇಂತಂಹದೊಂದು ಬಿಗ್ ನ್ಯೂಸ್ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

ಅಭಿಷೇಕ್ ಅಂಬರೀಶ್

By

Published : Jun 1, 2019, 2:29 AM IST

ಸ್ಯಾಂಡಲ್​ವುಡ್​ನಲ್ಲಿ ಡೆಬ್ಯೂ ಹೀರೋಗೆ ಸಿನಿಮಾದಲ್ಲಿ ಒಂದು ಅವಕಾಶ ಸಿಕ್ಕರೆ ಅದುವೇ ಅದೃಷ್ಠ ಅಂತಾ ಭಾವಿಸುತ್ತಾರೆ. ಅದೇ ರೀತಿ ಅದೆಷ್ಟೋ ಹೀರೋಗಳು ತಮ್ಮ ಮೊದಲ‌ ಸಿನಿಮಾಕ್ಕೆ ಸಂಭಾವನೆ ಪಡೆಯದೆ ಆಕ್ಟ್ ಮಾಡಿರೋ ಸಾಕಷ್ಟು ಉದಾಹರಣೆಗಳಿವೆ. ಸದ್ಯಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಸ್ವಲ್ಪ ಲಕ್ಕಿನೇ. ಯಾಕಂದ್ರೆ ಅಭಿಷೇಕ್ ಅಭಿನಯದ ಚೊಚ್ಚಲ ಚಿತ್ರ ಅಮರ್ ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಅಮರ್ ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ ಸ್ಯಾಂಡಲ್​ವುಡ್​ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಅಪ್ಪನಂತೆ ಸ್ಟೈಲ್, ಗತ್ತು , ಅದೇ ಕಣ್ಣುಗಳಿಂದ ಸಿನಿ ಪ್ರೇಕ್ಷಕರನ್ನ ರಂಜಿಸಿರೋ ಅಭಿಷೇಕ್ ಅಂಬರೀಶ್, ತಮ್ಮ ಮೊದಲ ಚಿತ್ರಕ್ಕೆ ಭಾರಿ ಸಂಭಾವನೆ ಪಡೆದಿದ್ದಾರಂತೆ. ಹೊಸ ಹೀರೋ ಅಂದ್ರೆ ಸಂಭಾವನೆ ಇಲ್ಲದೆ ಸಿನಿಮಾದಲ್ಲಿ ಆಕ್ಟ್ ಮಾಡಿಸುತ್ತಾರೆ. ಆದ್ರೆ, ಅಂಬರೀಶ್ ಮಗ ಅಭಿಷೇಕ್ ವಿಷ್ಯದಲ್ಲಿ ಹಾಗೇ ಆಗಿಲ್ಲ.

ನಿರ್ಮಾಪಕ ಸಂದೇಶ್ ಆಪ್ತರು ಹೇಳುವ ಪ್ರಕಾರ ಅಭಿ ಮೊದಲ ಚಿತ್ರಕ್ಕೆ ಬರೋಬ್ಬರಿ 1 ಕೋಟಿ ರೂ ಸಂಭಾವನೆ ಪಡೆದಿದ್ದಾರ‌ಂತೆ. ಇಂತಂಹದೊಂದು ಬಿಗ್ ನ್ಯೂಸ್ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಅಷ್ಟಕ್ಕೂ ಅಭಿಷೇಕ್ ಚೊಚ್ಚಲ ಚಿತ್ರಕ್ಕೆ ಇಷ್ಟೊಂದು ಸಂಭಾವನೆ ಪಡೆದಿದ್ದಾರೆ ಅಂದ್ರೆ ಸ್ಯಾಂಡಲ್​ವುಡ್​ನಲ್ಲಿ ಮೊದಲ ಚಿತ್ರಕ್ಕೇ ಇಷ್ಟೊಂದು ದೊಡ್ಡ ಮೊತ್ತ ತೆಗೆದುಕೊಂಡ ನಟ ಅಭಿಯಾಗುತ್ತಾರೆ.

For All Latest Updates

TAGGED:

ABOUT THE AUTHOR

...view details