ಕರ್ನಾಟಕ

karnataka

ETV Bharat / sitara

15 ಕೆ.ಜಿಯ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಯಂಗ್​​ ರೆಬಲ್​​ - abhishek ambarish birthday

ಅಭಿಮಾನಿಗಳ ಒತ್ತಾಯದ ಮೇರಗೆ ಅಭಿಷೇಕ್ ಜಯನಗರದಲ್ಲಿರೋ ತಮ್ಮ ನಿವಾಸದಲ್ಲಿ 15ಕೆ.ಜಿಯ ಕೇಕ್ ಕಟ್ ಮಾಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದಾರೆ.

Abhishek celebrates birthday by cutting 15kg cake
15 ಕೆಜಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಯಂಗ್​​ ರೆಬಲ್​​

By

Published : Oct 3, 2020, 4:13 PM IST

ಅಮರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಟ ಅಭಿಷೇಕ್ ಅಂಬರೀಶ್. ಈ ಬಾರಿ ರೆಬಲ್ ಸ್ಟಾರ್ ಅಂಬರೀಶ್ ಇಲ್ಲದೇ ಅಭಿಷೇಕ್ ಅಂಬರೀಷ್ 28ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

15 ಕೆ.ಜಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಯಂಗ್​​ ರೆಬಲ್​​

ಕೊರೊನಾ ಇರುವುದಿಂದ ಈ ವರ್ಷ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದರಂತೆ. ಆದರೆ, ಅಭಿಮಾನಿಗಳ ಒತ್ತಾಯದ ಮೇರಗೆ ಅಭಿಷೇಕ್ ಜಯನಗರದಲ್ಲಿರೋ ತಮ್ಮ ನಿವಾಸದಲ್ಲಿ ಅಭಿಮಾನಿಗಳು ತಂದಿದ್ದ 15ಕೆ.ಜಿಯ ಕೇಕ್ ಕಟ್ ಮಾಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದಾರೆ.

ಇನ್ನು ಕೇಕ್ ಕಟ್ ಮಾಡಿ ಮಾತನಾಡಿದ ಅಭಿ, ಈ ಕೊರೊನಾ ಸಮಯದಲ್ಲಿ ಹುಟ್ಟು ಹಬ್ಬ ಆಚರಣೆ ಬೇಡ ಅಂತಾ ಹೇಳಿದ್ರು, ಅಭಿಮಾನಿಗಳು ಅರೇಂಜ್ ಮಾಡಿರೋದು ತುಂಬಾ ಖುಷಿಯಾಗುತ್ತಿದೆ‌. ಹಾಗೇ ನನ್ನ ಹುಟ್ಟುಹಬ್ಬಕ್ಕೆ ಬಂದಿರುವ ಅಭಿಮಾನಿಗಳು ಕೂಡ ಅಷ್ಟೇ ಜೋಪಾನವಾಗಿ ಮನೆಗೆ ಹೋಗಬೇಕು. ಯಾಕೆಂದರೆ ಯಾರಿಗೆ ಕೊರೊನಾ ಬಂದಿದೆ ಅಂತಾ ಹೇಳೋದಿಕ್ಕೆ ಆಗೋಲ್ಲ, ಆಗ ಅವರಿಂದ ಮನೆಯವರಿಗೆ ಕೊರೊನಾ ಬರೋದು ಬೇಡ ಅನ್ನೋದು ನನ್ನ ಕಾಳಜಿ ಎಂದರು.

ಬ್ಯಾಡ್​​ ಮಾನರ್ಸ್​​ ಪೋಸ್ಟರ್​​​

ಇದ್ರ ಜೊತೆಗೆ ನನ್ನ ಹುಟ್ಟುಹಬ್ಬಕ್ಕೆ ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಚಿತ್ರದ ಟೀಸರ್ ಅನಾವರಣ ಮಾಡಿರೋದು ಖುಷಿ ತಂದಿದೆ ಎಂದು ಅಭಿಷೇಕ್ ಅಂಬರೀಶ್ ಹುಟ್ಟು ಹಬ್ಬದ ಸಂಭ್ರಮವನ್ನ ಹಂಚಿಕೊಂಡಿದ್ದಾರೆ.

ABOUT THE AUTHOR

...view details