ಕನ್ನಡ ಚಿತ್ರರಂಗದ ಅಜಾತಶತ್ರು ರೆಬಲ್ ಸ್ಟಾರ್ ಅಂಬರೀಶ್ ಅವರ 68ನೇ ಜನ್ಮದಿನದ ಪ್ರಯುಕ್ತ, ಅಭಿಷೇಕ್ ಅಂಬರೀಶ್ ಅಭಿನಯದ ಸೂರಿ ನಿರ್ದೇಶನ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.
ಕೈಯಲ್ಲಿ ಗನ್ ಹಿಡಿದು ವಿಭಿನ್ನ ಭಂಗಿಗಳಲ್ಲಿ ಅಭಿಷೇಕ್ ಅಂಬರೀಶ್ 'ಬ್ಯಾಡ್ ಮ್ಯಾನ್ಸರ್ಸ್' ಚಿತ್ರದ ಫಸ್ಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ದಾಖಲೆಯ 'ದುನಿಯಾ'ವನ್ನ ಸೃಷ್ಟಿಸಿದ್ದ ಸುಕ್ಕಾ ಸೂರಿ ಸದ್ಯ ಅಂಬರೀಶ್ ಮಗನ ಕೈಯಲ್ಲಿ ಗನ್ ನೀಡಿದ್ದಾರೆ.
ಬ್ಯಾಡ್ ಮ್ಯಾನರ್ಸ್ ಚಿತ್ರದ ಫಸ್ಟ್ ಲುಕ್ ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಕಥೆಯಾಗಿರೋ 'ಬ್ಯಾಡ್ ಮ್ಯಾನರ್ಸ್' ಚಿತ್ರಕ್ಕೆ, ನಿರ್ದೇಶಕ ಸೂರಿ ಜೊತೆ ಕೆಲಸ ಮಾಡಿರೋ ಸುರೇಂದ್ರ ನಾಥ್ ಹಾಗೂ ಆಮ್ರಿ ಸಂಭಾಷಣೆ ಬರೆದು ಜೊತೆಗೆ ಸ್ಕ್ರೀನ್ ಪ್ಲೇ ಕೂಡಾ ರೆಡಿ ಮಾಡಿದ್ದಾರೆ. ಚರಣ್ ರಾಜ್ ಸಂಗೀತವಿದ್ದು, ಕೆ. ಎಂ ಸುಧೀರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಅಂಬಿ ಮಗನ ಕೈಯಲ್ಲಿ ಗನ್ ಹಿಡಿಸಿರುವ ಸೂರಿಯ ಚಿತ್ರದ ಫಸ್ಟ್ ಲುಕ್ ಹೇಗಿರುತ್ತೆ ಅಂತಾ ಅಭಿಮಾನಿಗಳು ನಿರೀಕ್ಷೆ ಮಾಡಿದ್ರು. ಆದರೆ ಅಭಿ, ಕೈಯಲ್ಲಿ ಗನ್ ಹಿಡಿದು ಕ್ಯಾಮರಾಗೆ ಪೋಸ್ ನೀಡಿರೋದು ಅಭಿಮಾನಿಗಳಿಗೆ ಅಷ್ಟೊಂದು ಖುಷಿ ತಂದಿಲ್ಲ ಎನ್ನಲಾಗ್ತಿದೆ.