ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಇದೀಗ ಬಾಬ್ ಬಿಸ್ವಾಸ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಕೋಲ್ಕತ್ತಾದಲ್ಲಿ ನಡೆಯುತ್ತಿದ್ದು, ಈ ಸಿನಿಮಾಕ್ಕೆ ದಿವ್ಯಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಕೋಲ್ಕತ್ತಾದಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಸಿನಿಮಾದಲ್ಲಿನ ಅಭಿಷೇಕ್ ಪಾತ್ರದ ಫೋಟೋಗಳು ಸೋರಿಕೆಯಾಗಿವೆ. ಸದ್ಯ ಅಭಿಷೇಕ್ರ ಈ ವಿಭಿನ್ನ ಪಾತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.