ಎಲ್ಲೆಲ್ಲೂ ಕೊರೊನಾ ಬಗ್ಗೆ ಜಾಗೃತಿಯ ಮಾತುಗಳು ಕೇಳಿ ಬರುತ್ತಿವೆ. ಇದೀಗ ಅಭಿಷೇಕ್ ಬಚ್ಚನ್ ಕೊರೊನಾ ಜಾಗೃತಿ ಬಗ್ಗೆ ಹಾಡೊಂದನ್ನು ಹಾಡುವಂತೆ ಕ್ಯಾತ ಮ್ಯೂಸಿಕ್ ಕಂಪೋಸರ್ ಮತ್ತು ಗಾಯಕರಾಗಿರುವ ಎ.ಆರ್. ರೆಹಮನ್ ಮತ್ತು ಐರಿಶ್ ರಾಕ್ ಬಾಂಡ್ ಯು2 ಗೆ ಕೇಳಿಕೊಂಡಿದ್ದಾರೆ.
ಬ್ರಿಟಿಷ್ ಹಾಡುಗಾರ ಕ್ರಿಶ್ ಮಾರ್ಟಿನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೊರೊನಾ ವೈರಸ್ ಜಾಗೃತಿ ಬಗ್ಗೆ ಹಾಡೊಂದನ್ನು ಕಂಪೋಸ್ ಮಾಡಿ ಪೋಸ್ಟ್ ಮಾಡಿದ್ದರು. ಈ ಹಾಡಿನ ಲಿಂಕ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿರುವ ಅಭಿಷೇಕ್ ಯಾರಾದರೂ ಈ ಹಾಡನ್ನು ಎ.ಆರ್. ರೆಹಮನ್ ಮತ್ತು ಐರಿಶ್ ರಾಕ್ಗೆ ತಲುಪುವಂತೆ ಮಾಡಿ ಎಂದಿದ್ದಾರೆ.