ಕರ್ನಾಟಕ

karnataka

ETV Bharat / sitara

ದರ್ಶನ್​​​​ ಅಣ್ಣ ಇದ್ರೆ ಧೈರ್ಯ ಮತ್ತು ಸಂತೋಷ : ಅಭಿಷೇಕ್​​ - ದರ್ಶನ್​​​

ದರ್ಶನ ಅಣ್ಣ ಮಾತು ಕೊಟ್ಟಿದ ಹಾಗೆ ಇವತ್ತು ಬಂದಿದ್ರು. ಅವರು ಬಂದರೆ ನಮಗೆ ಒಂದು ಧೈರ್ಯ ಹಾಗೂ ಸಂತೋಷ ಎಂದು ಅಭಿಷೇಕ್ ಅಂಬರೀಷ್ ಹೇಳಿದರು.

ದರ್ಶನ್​​​​ ಅಣ್ಣ ಇದ್ರೆ ಧೈರ್ಯ ಮತ್ತು ಸಂತೋಷ : ಅಭಿಷೇಕ್​​
ದರ್ಶನ್​​​​ ಅಣ್ಣ ಇದ್ರೆ ಧೈರ್ಯ ಮತ್ತು ಸಂತೋಷ : ಅಭಿಷೇಕ್​​

By

Published : Jan 15, 2021, 6:45 PM IST

ಮಂಡ್ಯ :ಸಕ್ಕರೆ ನಾಡು ಮಂಡ್ಯದಲ್ಲಿ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಶೂಟಿಂಗ್​​​​ಗೆ ಸಂಸದೆ ಸುಮಲತಾ ಅಂಬರೀಶ್ ಹಾಗೂ ನಟ ದರ್ಶನ್ ಭೇಟಿ ನೀಡಿ ಶುಭಾಶಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನಟ ಅಭಿಷೇಕ್ ಕಳೆದ ವರ್ಷ ಸಿನಿಮಾ ಶುರುವಾಗಬೇಕಿತ್ತು. ಲಾಕ್ ಡೌನ್ ನಿಂದ ಸಿನಿಮಾ ಚಿತ್ರೀಕರಣ ತಡವಾಯಿತು. ಸಂಕ್ರಾಂತಿ ಹಬ್ಬಕ್ಕೆ ಒಂದು ಒಳ್ಳೆಯ ಗಿಫ್ಟ್ ಕೊಟ್ಟಿದ್ದಾರೆ. ತಾಯಿ ಹಾಗೂ ಅಣ್ಣ ಇಬ್ಬರೂ ಒಂದೇ ದಿನ ಬಂದಿರುವುದಕ್ಕೆ ಸಂತೋಷವಾಗಿದೆ ಎಂದರು.

ಮೊದಲ ದಿನ ಶೂಟಿಂಗ್ ಸ್ಥಳಕ್ಕೆ ಇಬ್ಬರೂ ಬಂದಿರುವುದು ಸಂತಸವಾಗಿದೆ. ದರ್ಶನ ಅಣ್ಣ ಮಾತು ಕೊಟ್ಟಿದ್ದ ಹಾಗೆ ಇವತ್ತು ಬಂದಿದ್ರು, ಅವರು ಬಂದರೆ ನಮಗೆ ಧೈರ್ಯ ಹಾಗೂ ಸಂತೋಷ ಎಂದ ಅವರು, ಮಂಡ್ಯದಲ್ಲೇ ಚಿತ್ರೀಕರಣ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಹೇಳಿದರು.

ದರ್ಶನ್​​​​ ಅಣ್ಣ ಇದ್ರೆ ಧೈರ್ಯ ಮತ್ತು ಸಂತೋಷ : ಅಭಿಷೇಕ್​​

ಮೊನ್ನೆ ನಿರ್ಮಾಪಕರು ಹೇಳಿದ್ರು, ಮಂಡ್ಯದಲ್ಲೆ ಅದು ಮೈಶುಗರ್ ಫ್ಯಾಕ್ಟರಿಯಲ್ಲಿ ಮಾಡ್ತಿವಿ ಅಂತಾ. ಏನೋ ಸಂಥಿಂಗ್ ಕನೆಕ್ಷನ್ ಇಸ್ ದೇರ್ ತುಂಬಾ ಸಂತೋಷವಾಗ್ತಿದೆ. ಸಂಸದರು ಅವರು ಕೆಲಸ ಮಾಡ್ತಿದ್ದಾರೆ, ಅವರ ಹೋರಾಟ ಬೇರೆ ನಮ್ಮ ಸಿನಿಮಾ ಬೇರೆ. ಎರಡೂ ಕೂಡ ಯಶಸ್ವಿಯಾಗಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇ‌ನೆ ಎಂದರು.

ಸಿನಿಮಾದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾತ್ರದ ಬಗ್ಗೆ ಮಾಹಿತಿ ನೀಡಿದ ಅವರು, ಅದು ಅವರನ್ನೇ ಕೇಳಬೇಕು ಎಂದು ನಗುತ್ತ ನುಡಿದರು.

ABOUT THE AUTHOR

...view details