ಸ್ಯಾಂಡಲ್ವುಡ್ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಇಬ್ಬರಿಗೂ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಅಭಿಷೇಕ್ ಹಾಗೂ ರಚಿತಾ ಇಬ್ಬರಿಗೂ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಅಭಿಷೇಕ್ ಅಂಬರೀಶ್ಗೆ ಇದು 27ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. 03 ಅಕ್ಟೋಬರ್ 1993 ರಂದು ಜನಿಸಿದ ಅಭಿಷೇಕ್ ಈಗ ಯಂಗ್ ರೆಬಲ್ ಸ್ಟಾರ್ ಎಂದೇ ಫೇಮಸ್. ಅಭಿಷೇಕ್ ಈ ಬಾರಿ ಮನೆಯಲ್ಲೇ ಬಹಳ ಸರಳವಾಗಿ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. "ಈ ಬಾರಿ ನಾನು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಅಪ್ಪನ ಹೆಸರಿನಲ್ಲಿ ಅಭಿಮಾನಿಗಳು ಒಂದೊಂದು ಗಿಡ ನೆಟ್ಟು ಹುಟ್ಟುಹಬ್ಬ ಆಚರಿಸಿ" ಎಂದು ಅಭಿ ಮನವಿ ಮಾಡಿದ್ದಾರೆ. 'ಅಮರ್' ನಂತರ ಅಭಿಷೇಕ್ ಈಗ 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ 3-4 ಸಿನಿಮಾಗಳ ಕಥೆಗಳನ್ನು ಅಭಿಷೇಕ್ ಕೇಳಿದ್ದು ಶೀಘ್ರದಲ್ಲೇ ಫೈನಲ್ ಮಾಡಲಿದ್ದಾರೆ ಎನ್ನಲಾಗಿದೆ.