ಬಿಗ್ಬಾಸ್ ಖ್ಯಾತಿಯ ಪ್ರಥಮ್ ಎಂಎಲ್ಎ ಚಿತ್ರದ ನಂತರ ನಟಿಸಿ ನಿರ್ದೇಶನ ಮಾಡುತ್ತಿರುವ ಸಿನಿಮಾ 'ನಟ ಭಯಂಕರ'. ಸದ್ಯಕ್ಕೆ ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು, ಪ್ರಥಮ್ ಈ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
'ನಟ ಭಯಂಕರ'ನ ಅಡ್ಡಾದಲ್ಲಿ ಜ್ಯೂನಿಯರ್ ಜಲೀಲ! - undefined
ಮೊನ್ನೆಯಷ್ಟೇ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದ ಸೆಟ್ಗೆ ಭೇಟಿ ನೀಡಿದ್ದ ಅಭಿಷೇಕ್ ಅಂಬರೀಶ್ ಇಂದು ಪ್ರಥಮ್ ನಿರ್ದೇಶಿಸಿ ಅಭಿನಯಿಸುತ್ತಿರುವ 'ನಟ ಭಯಂಕರ' ಶೂಟಿಂಗ್ ಸೆಟ್ಗೆ ಭೇಟಿ ನೀಡಿದ್ದಾರೆ.
!['ನಟ ಭಯಂಕರ'ನ ಅಡ್ಡಾದಲ್ಲಿ ಜ್ಯೂನಿಯರ್ ಜಲೀಲ!](https://etvbharatimages.akamaized.net/etvbharat/prod-images/768-512-3663940-thumbnail-3x2-jaleela.jpg)
ಜ್ಯೂನಿಯರ್ ಜಲೀಲ
ಈಗಾಗಲೇ 'ನಟ ಭಯಂಕರ' ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ. ಕಂಠೀರವ ಸ್ಟುಡಿಯೋದಲ್ಲಿ 'ನಟ ಭಯಂಕರ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ನಟ ಭಯಂಕರನಿಗೆ ಜ್ಯೂನಿಯರ್ ಜಲೀಲ ಅಭಿಷೇಕ್ ಅಂಬರೀಶ್ ಸರ್ಪ್ರೈಸ್ ನೀಡಿದ್ದಾರೆ. ನಿನ್ನೆಯಷ್ಟೇ ದರ್ಶನ್ ಅಭಿನಯದ 'ರಾಬರ್ಟ್' ಅಡ್ಡಾಕ್ಕೆ ಭೇಟಿ ನೀಡಿದ್ದ ಅಭಿಷೇಕ್, ಇಂದು 'ನಟ ಭಯಂಕರ' ಸೆಟ್ಗೆ ಭೇಟಿ ಕೊಟ್ಟು ಪ್ರಥಮ್ಗೆ ಸರ್ಪ್ರೈಸ್ ನೀಡಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಇದ್ದು, ಚಿತ್ರತಂಡದ ಜೊತೆ ಕಾಲ ಕಳೆದು ಬಂದಿದ್ದಾರೆ.