ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಳಕೆಯಾದ 'ನಿಖಿಲ್ ಎಲ್ಲಿದಿಯಪ್ಪ', 'ಜೋಡೆತ್ತು' ಎಂಬ ಪದಗಳು ಸೆನ್ಸೇಷನ್ ಹುಟ್ಟುಹಾಕಿದ್ದವು. ಈ ಪದಗಳನ್ನೇ ಟೈಟಲ್ ಆಗಿ ಬಳಸಿಕೊಂಡು ಸಿನಿಮಾ ಮಾಡಲು ಸಾಕಷ್ಟು ನಿರ್ಮಾಪಕರು ಪ್ರಯತ್ನಿಸಿದ್ದರು.
ಜೋಡೆತ್ತು ಚಿತ್ರದಲ್ಲಿ ಅಣ್ಣಂದಿರು ಜೊತೆಯಾಗೇ ನಟಿಸಬೇಕು ಅಂದ್ರು 'ಅಮರ್'
'ಮೆಜೆಸ್ಟಿಕ್' ಚಿತ್ರ ನಿರ್ಮಾಪಕ ರಾಮಮೂರ್ತಿ 'ಜೋಡೆತ್ತು' ಟೈಟಲನ್ನು ಫಿಲ್ಮ್ ಚೇಂಬರ್ನಲ್ಲಿ ನೋಂದಣಿ ಮಾಡಿಸಿದ್ದಾರೆ. ಇನ್ನು ಈ ಹೆಸರಿನ ಸಿನಿಮಾದಲ್ಲಿ ನನ್ನ ಅಣ್ಣಂದಿರಾದ ದರ್ಶನ್ ಹಾಗೂ ಯಶ್ ನಟಿಸಿದರೆ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎಂದು ಅಭಿಷೇಕ್ ಅಂಬರೀಶ್ ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ 'ಎಲ್ಲಿದಿಯಪ್ಪ' ಎಂಬ ಟೈಟಲ್ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಆಗಿದೆ. ಇದೀಗ 'ಜೋಡೆತ್ತು' ಎಂಬ ಟೈಟಲನ್ನು ಮೆಜೆಸ್ಟಿಕ್ ಚಿತ್ರ ನಿರ್ಮಾಪಕ ರಾಮಮೂರ್ತಿ ಫಿಲ್ಮ್ ಚೇಂಬರ್ನಲ್ಲಿ ನೋಂದಣಿ ಮಾಡಿಸಿದ್ದಾರೆ. ಹಾಗೆ ದರ್ಶನ್ ಜೊತೆ ಈ ಸಿನಿಮಾ ಮಾಡುವುದಾಗಿಯೂ ಘೋಷಿಸಿದ್ದಾರೆ. ಅಭಿಷೇಕ್ ಅಂಬರೀಶ್ ಕೂಡಾ ಈ ಟೈಟಲ್ ಮೇಲೆ ಸಿನಿಮಾ ಬರಬೇಕು ಅಂತ ಹೇಳಿದ್ದಾರೆ. ಅಲ್ಲದೆ ತಮಗಿರುವ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ.
'ಅಮರ್' ಸಿನಿಮಾ ಪ್ರೆಸ್ಮೀಟ್ ಸಮಯದಲ್ಲಿ ಅಭಿಷೇಕ್ ಅಂಬರೀಶ್ ಈ 'ಜೋಡೆತ್ತು' ಸಿನಿಮಾದಲ್ಲಿ ನನ್ನ ಸಹೋದರರಾದ ದರ್ಶನ್ ಹಾಗೂ ಯಶ್ ಅಭಿನಯಿಸಿದರೆ ಈ ಸಿನಿಮಾ ಸೂಪರ್ ಹಿಟ್ ಆಗುವುದು ಗ್ಯಾರಂಟಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ಟ್ರೆಂಡಿಂಗ್ನಲ್ಲಿರುವ ಈ ಪದಗಳ ಹೆಸರಿನಲ್ಲಿ ಯಾರೇ ಸಿನಿಮಾ ಮಾಡಿದ್ರು ಫಸ್ಟ್ ಡೇ ಫಸ್ಟ್ ಶೋ ನೋಡ್ತಿನಿ ಅಂತಾ ಜೂನಿಯರ್ ಜಲೀಲ ಹೇಳಿದ್ದಾರೆ. ಒಟ್ಟಿನಲ್ಲಿ ಈ ಟೈಟಲ್ಗಳ ಸಿನಿಮಾಗಳು ಯಾವಾಗ ಸೆಟ್ಟೇರುತ್ತವೆ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ.