ಒಲಂಪಿಕ್ನ ಶೂಟರ್ ವಿಭಾದಲ್ಲಿ ಚಿನ್ನದ ಪದಕ ಗೆದ್ದಿರುವ ಅಭಿನವ್ ಬಿಂದ್ರ ಜೀವನಾಧಾರಿತ ಸಿನಿಮಾ ಬಾಲಿವುಡ್ನಲ್ಲಿ ಮೂಡಿ ಬರುತ್ತಿದೆ.
ಈ ಸಿನಿಮಾವನ್ನು ನಿರ್ದೇಶಕ ಹೀರಜ್ ಮರ್ಫಾಟಿಯಾ ಕಳೆದ ಮೂರು ವರ್ಷಗಳ ಹಿಂದೇ ಘೋಷಿಸಿದ್ದರು. ಆದ್ರೆ, ಈ ಸಿನಿಮಾ ಇನ್ನೂ ಸೆಟ್ಟೇರಿಲ್ಲ.
ಅಭಿನಬ್ ಬಿಂದ್ರ ಹಾಗೂ ಅವರ ತಂದೆಯ ಪಾತ್ರವನ್ನು ಯಾರು ಮಾಡುತ್ತಾರೆ ಎಂಬ ವಿಷಯ ಚರ್ಚೆಯಲ್ಲಿದ್ದು, ಅದಕ್ಕೂ ಇದೀಗ ಉತ್ತರ ಸಿಕ್ಕಂತಾಗಿದೆ.
ಸದ್ಯ ಅಭಿನವ್ ಬಿಂದ್ರ ಬಯೋಪಿಕ್ನಲ್ಲಿ ಅಭಿನವ್ ಪಾತ್ರದಲ್ಲಿ ಅನಿಲ್ ಕಪೂರ್ ಮಗ ಹರ್ಷ ಕಪೂರ್ ನಟಿಸುತ್ತಿದ್ರೆ, ತಂದೆಯ ಪಾತ್ರಕ್ಕೆ ಅನಿಲ್ ಕಪೂರ್ ಬಣ್ಣ ಹಚ್ಚುತ್ತಾರಂತೆ.
ಈ ಹಿಂದೆ ಈ ಎರಡು ಪಾತ್ರಗಳಿಗೆ ಸಾಕಷ್ಟು ನಟರ ಹೆಸರು ಕೇಳಿ ಬಂದಿದ್ದವು. ರಿಶಿ ಕಪೂರ್ ಅಭಿನವ್ ಬಿಂದ್ರ ತಂದೆಯ ಪಾತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡಿದ್ದವು.
ಇದಕ್ಕೆ ಕಾರಣ ರಣಬೀರ್ ಕಪೂರ್ ಮತ್ತು ಅಭಿನವ್ ಒಂದೇ ಕಾಲಮಾನದವರಾಗಿದ್ದರೆಂದು. ಆದ್ರೆ, ಇದು ಸರಿ ಹೊಂದದ ಕಾರಣ, ಸದ್ಯ ಹರ್ಷ ಕಪೂರ್ ಅಭಿನವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ತಮ್ಮ ಪಾತ್ರಗಳ ಬಗ್ಗೆ ಖುಷಿ ವ್ಯಕ್ತಪಡಿಸಿರುವ ತಂದೆ ಮತ್ತು ಮಗ, ನಮಗೆ ಅಭಿನಯ್ ಬಯೋಪಿಕ್ನಲ್ಲಿ ನಟಿಸಲು ಆಸಕ್ತಿ ಇದೆ ಎಂದು ತಿಳಿಸಿದ್ದಾರೆ.