2009 ರಲ್ಲಿ 'ಬಾಜಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ಅಭಿಮನ್ಯು ನಿಮಗೆಲ್ಲಾ ನೆನಪಿರಬಹುದು. ಇವು ದಿವಂಗತ ಕಾಶೀನಾಥ್ ಪುತ್ರ ಅಭಿಮನ್ಯು. ಇವರ ಮೂಲ ಹೆಸರು ಅಲೋಕ್. ಮೊದಲ ಚಿತ್ರಕ್ಕೆ ಅಂದುಕೊಂಡಂತ ರೆಸ್ಪಾನ್ಸ್ ಸಿಗಲಿಲ್ಲ.
ಎಂಟು ವರ್ಷಗಳ ಗ್ಯಾಪ್ ನಂತರ ಸ್ಯಾಂಡಲ್ವುಡ್ಗೆ ಮತ್ತೆ ಎಂಟ್ರಿಯಾದ ಕಾಶೀನಾಥ್ ಪುತ್ರ - ದೀಪಾವಳಿ
‘ಬಾಜಿ‘ ಹಾಗೂ ‘12 ಎಎಂ ಮಧ್ಯರಾತ್ರಿ’ ಸಿನಿಮಾಗಳ ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ಕಾಶೀನಾಥ್ ಪುತ್ರ ಅಭಿಮನ್ಯು ಕಾಶೀನಾಥ್ ಇದೀಗ 8 ವರ್ಷಗಳ ಗ್ಯಾಪ್ ಬಳಿಕ ಮತ್ತೆ ಚಿತ್ರರಂಗಕ್ಕೆ ವಾಪಸಾಗಿದ್ದಾರೆ. ಕಿರಣ್ ಸೂರ್ಯ ನಿರ್ದೇಶನದ ಸಿನಿಮಾವೊಂದರಲ್ಲಿ ಅಭಿಮನ್ಯು ನಟಿಸುತ್ತಿದ್ದಾರೆ ಎನ್ನಲಾಗಿದೆ.
ಇದೀಗ ಸುಮಾರು 8 ವರ್ಷಗಳ ನಂತರ ಅಭಿಮನ್ಯು ಸ್ಯಾಂಡಲ್ವುಡ್ಗೆ ವಾಪಸಾಗಿದ್ದಾರೆ. ಅಪ್ಪನ ಅಗಲಿಕೆ ನೋವಿನಿಂದ ಅಭಿಮನ್ಯು ಈಗೀಗ ಹೊರಬರುತ್ತಿದ್ದಾರಂತೆ. 'ಬಾಜಿ' ಚಿತ್ರದ ನಂತರ 2012 ರಲ್ಲಿ ಬಿಡುಗಡೆ ಆದ ‘12 ಎ ಎಂ ಮಧ್ಯರಾತ್ರಿ’ ಸಿನಿಮಾದಲ್ಲಿ ಅಭಿಮನ್ಯು ತಂದೆ ಕಾಶೀನಾಥ್ ಜೊತೆಗೆ ನಟಿಸಿದ್ದರು. ಕ್ರಿಕೆಟ್ನಲ್ಲಿ ಆಸಕ್ತಿ ಇರುವುದರಿಂದ ಕಿಚ್ಚ ಸುದೀಪ್ ಅವರ ಕರ್ನಾಟಕ ಬುಲ್ಡೋಜರ್ ಸೆಲಬ್ರಿಟಿ ಲೀಗ್ ಜೊತೆ ಕೂಡಾ ಅಭಿಮನ್ಯು ಜೊತೆಯಾಗಿದ್ದರು. ಕಿರಣ್ ಸೂರ್ಯ ನಿರ್ದೇಶನದ ಸಿನಿಮಾವೊಂದರಲ್ಲಿ ನಟಿಸಲು ಅಭಿಮನ್ಯು ಒಪ್ಪಿಕೊಂಡಿದ್ದಾರಂತೆ. ಇದಕ್ಕಾಗಿ ಅವರು ತಯಾರಿ ಕೂಡಾ ನಡೆಸಿದ್ದಾರೆ.
ಕಿರಣ್ ಸೂರ್ಯ ‘ದೇವಕಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕ ಆಗಿ ಕೆಲಸ ಮಾಡಿದ್ದವರು. ಇದೀಗ ಈ ಚಿತ್ರದಿಂದ ಸ್ವತಂತ್ಯ್ರ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡಾ ಅವರೇ ಬರೆದಿದ್ದಾರೆ. ಇದೊಂದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾ ವಸ್ತುವಂತೆ. ಸುದರ್ಶನ್ ಆರ್ಟ್ಸ್ ಬ್ಯಾನರ್ ಅಡಿ ಎಂ.ಸಿ. ಗೌಡ ಹಾಗೂ ಜತಿನ್ ಜಿ. ಪಟೇಲ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಗೌತಮ್ ಮನು ಛಾಯಾಗ್ರಹಣವಿದೆ. ಆರ್.ಎಸ್. ಗಣೇಶ್ ನಾರಾಯಣ್ ಸಂಗೀತ ನಿರ್ದೇಶಿಸಿರುವ ಈ ಚಿತ್ರದಲ್ಲಿ ಎರಡು ಹಾಡುಗಳಿದೆಯಂತೆ. ದೀಪಾವಳಿ ವೇಳೆಗೆ ಸಿನಿಮಾ ಸೆಟ್ಟೇರಲಿದೆ.