ಕೊರೊನಾ ಹಾವಳಿ ಜಾಸ್ತಿಯಾದ ಕಾರಣದಿಂದ ಕರ್ನಾಟಕದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಣೆಯಾಗಿದೆ. ಲಾಕ್ಡೌನ್ ಕಾರಣದಿಂದಾಗಿ ಕನ್ನಡದ ಧಾರಾವಾಹಿ ತಂಡಗಳು ಹೈದರಬಾದ್ಗೆ ತೆರಳಿ ಅಲ್ಲಿ ಶೂಟಿಂಗ್ ಮಾಡುತ್ತಿವೆ.
ಹೈದರಾಬಾದ್ಗೆ ತೆರಳಲಾಗದೆ ಯಾರಿವಳು ಧಾರಾವಾಹಿಯಿಂದ ಹೊರಬಂದ ಆರವ್ ಸೂರ್ಯ! - ನಟ ಆರವ್ ಸೂರ್ಯ,
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಾರಿವಳು ಧಾರಾವಾಹಿಯಲ್ಲಿ ನಾಯಕ ಡಾ. ನಿಖಿಲ್ ಆಗಿ ಅಭಿನಯಿಸುತ್ತಿರುವ ಆರವ್ ಸೂರ್ಯ ಇದೀಗ ಪಾತ್ರದಿಂದ ಹೊರ ಬಂದಿದ್ದಾರೆ.
ಯಾರಿವಳು ಧಾರಾವಾಹಿಯಿಂದ ಹೊರಬಂದ ಆರವ್ ಸೂರ್ಯ
ಈಗಾಗಲೇ ಒಂದಷ್ಟು ಧಾರಾವಾಹಿ ತಂಡಗಳು ಹೈದರಬಾದ್ಗೆ ತೆರಳಿದ್ದು, ಶೂಟಿಂಗ್ ಕೂಡ ಶುರುವಾಗಿದೆ. ಇದೀಗ ಯಾರಿವಳು ಧಾರಾವಾಹಿ ತಂಡ ಕೂಡ ಹೋಗಲಿದ್ದು, ಅದೇ ಕಾರಣದಿಂದ ಆರವ್ ಸೂರ್ಯ ಧಾರಾವಾಹಿಯಿಂದ ಹೊರ ಬಂದಿದ್ದಾರೆ.
ಹೈದರಾಬಾದ್ಗೆ ತೆರಳಿ ಶೂಟಿಂಗ್ನಲ್ಲಿ ಭಾಗವಹಿಸುವುದು ಅಸಾಧ್ಯವಾದ ಕಾರಣ ನಿಖಿಲ್ ಪಾತ್ರಕ್ಕೆ ವಿದಾಯ ಹೇಳಿದ್ದರು ಆರವ್ ಸೂರ್ಯ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಇವಳೇ ವೀಣಾಪಾಣಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಆರವ್ ಸೂರ್ಯ, ಬಳಿಕ ನಂದಿನಿ, ಮರಳಿ ಬಂದಳು ಸೀತೆ ಧಾರಾವಾಹಿಯಲ್ಲಿ ಅಭಿನಯಿಸಿದ್ದರು.