ಮುಂಬೈ (ಮಹಾರಾಷ್ಟ್ರ):ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಹಿಂದಿ ಭಾಷೆಯ ಮೇಲಿನ ಹಿಡಿತ ಹಾಗೂ ವಾಕ್ಚಾತುರ್ಯ ನಿಸ್ಸಂದೇಹವಾಗಿ ವಿದ್ವಾಂಸರಿಗೆ ಸಮಾನವಾಗಿದೆ. ಆದರೆ ಈ ಬಾರಿ ಅವರ ಮೊಮ್ಮಗಳು ಆರಾಧ್ಯ ಬಚ್ಚನ್ ಹಿಂದಿಯಲ್ಲಿ ತನ್ನ ವಾಕ್ ಚಾತುರ್ಯದಿಂದ ಜನರ ಮನ ಗೆದ್ದಿದ್ದಾಳೆ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಮಗಳು ಆರಾಧ್ಯ ಹಿಂದಿಯಲ್ಲಿ ಕೆಲವು ಸಾಲುಗಳನ್ನು ಪಠಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಕ್ಲಿಪ್‌ನಲ್ಲಿ, ಶಾಲಾ ಸಮವಸ್ತ್ರದಲ್ಲಿ ಕಾಣಿಸಿಕೊಂಡಿರುವ ಪುಟ್ಟ ಹುಡುಗಿ ಆರಾಧ್ಯ ಹಿಂದಿ ಭಾಷೆಯ ಮಹತ್ವದ ಬಗ್ಗೆ ಮಾತನಾಡಿದ್ದಾಳೆ. ಯಾರಾದರೂ ಒಂದು ಭಾಷೆ ಕಲಿಯಬೇಕೆಂದಿದ್ದರೆ ಅದನ್ನು ಕಾವ್ಯದ ಮೂಲಕ ಕಲಿಯಬೇಕು ಎಂದು ಹೇಳಿದ್ದಾಳೆ.