ಅಮಲಾ ಪೌಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಆಡೈ' ಸಿನಿಮಾದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆಯಾಗಿದೆ. ಶನಿವಾರ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಚಿತ್ರತಂಡದ ಬಹುತೇಕ ಎಲ್ಲಾ ಸದಸ್ಯರು ಹಾಜರಿದ್ದರು.
'ಆಡೈ' ಆಡಿಯೋ ಬಿಡುಗಡೆ...ಕುತೂಹಲ ಇಮ್ಮಡಿಗೊಳಿಸಿದ ಟ್ರೇಲರ್..! - undefined
ರತ್ನಕುಮಾರ್ ಕಥೆ ಬರೆದು ನಿರ್ದೇಶಿಸಿರುವ 'ಆಡೈ' ಅಫೀಶಿಯಲ್ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ನೋಡಿದ ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಜುಲೈ 19 ರಂದು ಸಿನಿಮಾ ತೆರೆ ಕಾಣುತ್ತಿದೆ.
!['ಆಡೈ' ಆಡಿಯೋ ಬಿಡುಗಡೆ...ಕುತೂಹಲ ಇಮ್ಮಡಿಗೊಳಿಸಿದ ಟ್ರೇಲರ್..!](https://etvbharatimages.akamaized.net/etvbharat/prod-images/768-512-3771087-thumbnail-3x2-aadai.jpg)
ಪ್ರತಿ ವಿಷಯಕ್ಕೂ ಬೆಟ್ ಕಟ್ಟುವ ಅಭ್ಯಾಸ ಹೊಂದಿರುವ ನಾಯಕಿ ತನ್ನ ತಾಯಿಯನ್ನೂ ಬೆಟ್ ಕಟ್ಟಲು ಕೇಳುತ್ತಾಳೆ. ಆಗ ಆಕೆಯ ತಾಯಿ ಎಲ್ಲದಕ್ಕೂ ಬೆಟ್ ಕಟ್ಟುವ ಅಭ್ಯಾಸ ಬಿಡು ಎಂದು ಬುದ್ಧಿ ಹೇಳುವ ದೃಶ್ಯದ ಮೂಲಕ ಟ್ರೇಲರ್ ಆರಂಭವಾಗುತ್ತದೆ. ಆಫೀಸಿನಲ್ಲಿ ರಾತ್ರಿ ತನ್ನ ಫ್ರೆಂಡ್ಸ್ ಜೊತೆ ಪಾರ್ಟಿಗಾಗಿ ಸೇರುವ ನಾಯಕಿ 'ನಾವು ಹುಟ್ಟಿದಾಗ ಯಾರೂ ಬಟ್ಟೆ ಧರಿಸಿ ಹುಟ್ಟಿಲ್ಲ.. ಆದ್ದರಿಂದ ಈಗ ನಾವೆಲ್ಲಾ ಬಟ್ಟೆ ತೆಗೆದರೆ ನಾವು ಹುಟ್ಟಿದಾಗ ಹೇಗಿದ್ದೇವೋ ಹಾಗೆ ಆಗುತ್ತೇವೆ' ಎಂದು ಹೇಳುವ ಡೈಲಾಗ್ ಚಿತ್ರದ ಟೀಸರನ್ನು ನೆನಪಿಸುತ್ತದೆ. ಟೀಸರ್ ಹಾಗೂ ಟ್ರೇಲರ್ ಚಿತ್ರದ ಮೇಲಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ವಿ ಸ್ಟುಡಿಯೋಸ್ ಬ್ಯಾನರ್ ಅಡಿ ವಿಜಿ ಸುಬ್ರಮಣಿಯನ್ ನಿರ್ಮಿಸಿರುವ ಈ ಸಿನಿಮಾವನ್ನು ರತ್ನಕುಮಾರ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಸಿನಿಮಾ ಜುಲೈ 19 ರಂದು ಬಿಡುಗಡೆಯಾಗಲಿದೆ.