ಕಳೆದ ವರ್ಷ ಸ್ಯಾಂಡಲ್ವುಡ್ ಹಾಗೂ ಕನ್ನಡ ಕಿರುತೆರೆಯ ಬಹುತೇಕ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ವರ್ಷ ಕೂಡಾ ಕೆಲವು ಸಿನಿಮಾ ನಟ-ನಟಿಯರು ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ಆ ಸಾಲಿಗೆ ಮೊದಲು ಸೇರುತ್ತಿರುವವರು 'ಆ ದಿನಗಳು' ಖ್ಯಾತಿಯ ಚೇತನ್.
ಐದು ವರ್ಷಗಳ ಲವ್ಸ್ಟೋರಿಗೆ ಮದುವೆ ಮುದ್ರೆ ಒತ್ತಲು ರೆಡಿಯಾದ 'ಆ ದಿನಗಳು' ಚೇತನ್ - ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಆ ದಿನಗಳು ಚೇತನ್
ಅಸ್ಸೋಂ ಮೂಲದ ಮೇಘಾಗೆ ಮನಸೋತಿರುವ ಚೇತನ್, ಸತತ ಐದು ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಹ್ಯೂಮನ್ ರೈಟ್ಸ್ ವಿಷಯದಲ್ಲಿ ಕಾನೂನು ಅಧ್ಯಯನ ಮಾಡುತ್ತಿರುವ ಅಸ್ಸೋಂ ಮೂಲದ ಮೇಘ ಎಂಬುವವರನ್ನು ಚೇತನ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.
ಅಸ್ಸೋಂ ಮೂಲದ ಮೇಘಾಗೆ ಮನಸೋತಿರುವ ಚೇತನ್, ಸತತ ಐದು ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಹ್ಯೂಮನ್ ರೈಟ್ಸ್ ವಿಷಯದಲ್ಲಿ ಕಾನೂನು ಅಧ್ಯಯನ ಮಾಡುತ್ತಿರುವ ಅಸ್ಸೋಂ ಮೂಲದ ಮೇಘ ಎಂಬುವವರನ್ನು ಚೇತನ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ವಿಶೇಷ ಎಂದರೆ ಇಬ್ಬರೂ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಇಬ್ಬರಿಗೂ ಕನ್ನಡದ ಮೇಲೆ ಅಭಿಮಾನ ಹೆಚ್ಚು. ಇವರಿಬ್ಬರ ಭೇಟಿಗೆ ಸಮಾಜ ಸೇವೆಯೇ ಕಾರಣ.
ಫೆಬ್ರವರಿ 2 ರಂದು ಬೆಂಗಳೂರಿನ ಗಾಂಧಿಭವನದ ಪಕ್ಕದಲ್ಲಿರುವ ವಿನೋಭಾ ಭಾವೆ ಭವನದಲ್ಲಿ ಚೇತನ್ ಹಾಗೂ ಮೇಘಾ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹಳ ಸರಳವಾಗಿ ನಡೆಯಲಿರುವ ಮದುವೆಯಲ್ಲಿ ಸಿದ್ಧಿ, ಸೋಲಿಗ, ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳ ನಾಯಕರು ಭಾಗಿಯಾಗಲಿದ್ದಾರೆ. ಅಲ್ಲದೆ ಅಮೇರಿಕದಿಂದ ಚೇತನ್ ಕುಟುಂಬಸ್ಥರು,ಹಾಗೂ ಸ್ನೇಹಿತರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.