ಕರ್ನಾಟಕ

karnataka

ETV Bharat / sitara

ತೆಲುಗಿಗೆ ಹೊರಟರು 'ಆ ದಿನಗಳು' ಚೇತನ್: ಮೊದಲ ಬಾರಿ ಪೊಲೀಸ್​ ಪಾತ್ರದಲ್ಲಿ ನಟನೆ - ಆ ದಿನಗಳು ಚೇತನ್​ ಸುದ್ದಿ

ಇದೀಗ ಮೊದಲ ಬಾರಿಗೆ ತೆಲುಗು ಚಿತ್ರವೊಂದರಲ್ಲಿ ನಟಿಸುವುದಕ್ಕೆ ಚೇತನ್​ ಸಜ್ಜಾಗಿದ್ದಾರೆ. ಸಂಗೀತ ನಿರ್ದೇಶಕ ಸಾಯಿಕಾರ್ತಿಕ್​ ನಿರ್ಮಾಣದ ಹೊಸ ಚಿತ್ರವೊಂದರಲ್ಲಿ ಚೇತನ್​ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.

aa dinagalu chetan acting in Telegu movie
ತೆಲುಗಿಗೆ ಹೊರಟರು 'ಆ ದಿನಗಳು' ಚೇತನ್

By

Published : Dec 5, 2020, 4:37 PM IST

ಬಹುಶಃ 'ಆ ದಿನಗಳು' ಖ್ಯಾತಿಯ ಚೇತನ್​ ಸತತವಾಗಿ ಚಿತ್ರಗಳನ್ನು ಮಾಡಿರುತ್ತಿದ್ದರೆ, ಇಷ್ಟರಲ್ಲಿ ಮಿನಿಮಮ್​ 30 ಚಿತ್ರಗಳಲ್ಲಾದರೂ ನಟಿಸಿರುತ್ತಿದ್ದರು. ಹಾಗೆಯೇ, ಕನ್ನಡವಲ್ಲದೆ ಬೇರೆ ಭಾಷೆಗಳಿಗೂ ಈ ಮುಂಚೆಯೇ ಎಂಟ್ರಿ ಕೊಟ್ಟಿರುತ್ತಿದ್ದರು. ಆದರೆ, ಸಿನಿಮಾ ಜೊತೆಗೆ ಸಾಮಾಜಿಕ ಹೋರಾಟ, ಕಳಕಳಿ ಎಂದು ಬೇರೆ ಕಡೆ ಗಮನಹರಿಸಿದ್ದರಿಂದ, ಹೆಚ್ಚು ಚಿತ್ರಗಳಲ್ಲಿಯೂ ಅವರು ನಟಿಸಲಿಲ್ಲ. ಹಾಗೆಯೇ, ಬೇರೆ ಭಾಷೆಗಳತ್ತ ಹೋಗುವುದಕ್ಕೂ ಆಗಿರಲಿಲ್ಲ.

'ಆ ದಿನಗಳು' ಚೇತನ್ ಮತ್ತು ಪತ್ನಿ ಪೇಘಾ

ಇದೀಗ ಮೊದಲ ಬಾರಿಗೆ ತೆಲುಗು ಚಿತ್ರವೊಂದರಲ್ಲಿ ನಟಿಸುವುದಕ್ಕೆ ಚೇತನ್​ ಸಜ್ಜಾಗಿದ್ದಾರೆ. ಸಂಗೀತ ನಿರ್ದೇಶಕ ಸಾಯಿಕಾರ್ತಿಕ್​ ನಿರ್ಮಾಣದ ಹೊಸ ಚಿತ್ರವೊಂದರಲ್ಲಿ ಚೇತನ್​ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಈ ಚಿತ್ರದಲ್ಲಿ ಕನ್ನಡದಲ್ಲೂ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಚಿತ್ರವನ್ನು ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವಲ್ಲಿ ದೊಡ್ಡ ಹೆಸರು ಮಾಡಿರುವ ವಿರಾಟ್ ಚಕ್ರವರ್ತಿ ನಿರ್ದೇಶನ ಮಾಡಲಿದ್ದು, ಮುಂದಿನ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಹೈದರಾಬಾದ್‌ನಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಯುವ ಸಾಧ್ಯತೆ ಇದೆ.

ನಟ ಚೇತನ್​​

ಇದನ್ನೂ ಓದಿ : ಅಮ್ಮನಾಗುವ ಖುಷಿಯಲ್ಲಿ ಬಿಗ್​ ಬಾಸ್ ​ಖ್ಯಾತಿಯ ನಟಿ

ಇಷ್ಟು ವರ್ಷ ಹಲವು ಚಿತ್ರಗಳಲ್ಲಿ ಚೇತನ್​ ನಟಿಸಿದ್ದರೂ ಯಾವೊಂದು ಚಿತ್ರದಲ್ಲೂ ಅವರು ಪೊಲೀಸ್​ ಪಾತ್ರ ಮಾಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ, ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ ಚೇತನ್.

'ಆ ದಿನಗಳು' ಚೇತನ್

ABOUT THE AUTHOR

...view details