ಕರ್ನಾಟಕ

karnataka

By

Published : Oct 9, 2019, 4:45 PM IST

ETV Bharat / sitara

ಪ್ಲಾಸ್ಟಿಕ್ ನಿರ್ಮೂಲನೆ ಜಾಗೃತಿಗೆ ತಯಾರಾಯ್ತು 'ಎ ಟೇಲ್ ಆಫ್​​​ ವಂದೇ ಮಾತರಂ' ಆಲ್ಬಂ..

ಯತೀಶ್ ರೈ ವೋರ್ಕಡಿ, ಡ್ಯಾನಿಯಲ್ ಹಾಗೂ ಸುಹಿತ್ ಪರಿಕಲ್ಪನೆಯೊಂದಿಗೆ ಮೂಡಿ ಬಂದಿರುವ ಈ ಆಲ್ಬಂನಲ್ಲಿ ಶೃತಿ ಜೈನ್ ಭೂಮಿ ಆಗಿ, ಸತ್ಯಮಂಜ ದೈವ ಆಗಿ ನಟಿಸಿದ್ದಾರೆ. ಬಂಕಿಮ್ ಚಂದ್ರ ಚಟರ್ಜಿ ಅವರ 'ವಂದೇ ಮಾತರಂ' ಗೀತೆಯನ್ನು ಈ ಆಲ್ಪಂಗೆ ಬಳಸಿಕೊಳ್ಳಲಾಗಿದೆ.

ಎ ಟೇಲ್ ಆಫ್​​​ ವಂದೇ ಮಾತರಂ

ಪ್ಲಾಸ್ಟಿಕ್​​​​ನಿಂದ ಉಂಟಾಗುತ್ತಿರುವ ತೊಂದರೆಗಳು ಒಂದಲ್ಲಾ ಎರಡಲ್ಲ. ಪ್ರಕೃತಿಯನ್ನು ನಾಶ ಮಾಡುತ್ತಿರುವ ಮಹಾಮಾರಿಗಳಲ್ಲಿ ಈ ಪ್ಲಾಸ್ಟಿಕ್ ಕೂಡಾ ಒಂದು. ಪ್ಲಾಸ್ಟಿಕ್ ನಿಲ್ಲಿಸುವಂತೆ ಮನವಿ ಮಾಡುತ್ತಿದ್ದರೂ ಇನ್ನೂ ಇದರ ಬಳಕೆ ನಿಂತಿಲ್ಲ.

ಇನ್ನು, ಪ್ಲಾಸ್ಟಿಕ್​​​ನಿಂದ ಉಂಟಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಎಷ್ಟೋ ಜಾಗೃತಿ ಕಾರ್ಯಕ್ರಮಗಳು ಜರುಗಿವೆ. ಇದೀಗ ದಕ್ಷಿಣ ಕನ್ನಡದ 'ಲೈಫ್ ​​​​​​ಲೈಕ್' ಎಂಬ ತಂಡವೊಂದು 'ಕ್ಲೀನ್ ಕುಂದಾಪುರ ಪ್ರಾಜೆಕ್ಟ್​​​​' ಅಭಿಯಾನದೊಂದಿಗೆ ಕೈ ಜೋಡಿಸಿ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸಲು ಮುನ್ನುಡಿ ಇಟ್ಟಿದೆ. ಇದರ ಅಂಗವಾಗಿ 'ಎ ಟೇಲ್ ಆಫ್ ವಂದೇ ಮಾತರಂ' ಎಂಬ ಮ್ಯೂಸಿಕ್ ಆಲ್ಬಂ ಒಂದನ್ನು ಈ ತಂಡ ಹೊರತಂದಿದೆ. ಯತೀಶ್ ರೈ ವೋರ್ಕಡಿ, ಡ್ಯಾನಿಯಲ್ ಹಾಗೂ ಸುಹಿತ್ ಪರಿಕಲ್ಪನೆಯೊಂದಿಗೆ ಮೂಡಿ ಬಂದಿರುವ ಈ ಆಲ್ಬಂನಲ್ಲಿ ಶೃತಿ ಜೈನ್ ಭೂಮಿ ಆಗಿ, ಸತ್ಯಮಂಜ ದೈವ ಆಗಿ ನಟಿಸಿದ್ದಾರೆ. ಬಂಕಿಮ್ ಚಂದ್ರ ಚಟರ್ಜಿ ಅವರ 'ವಂದೇ ಮಾತರಂ' ಗೀತೆಯನ್ನು ಈ ಆಲ್ಪಂಗೆ ಬಳಸಿಕೊಳ್ಳಲಾಗಿದೆ.

ಶೃತಿ ಜೈನ್

ಯತೀಶ್ ರೈ ವೋರ್ಕಡಿ ಈ ಆಲ್ಬಂಗೆ ನಿರ್ದೇಶನ ಮಾಡಿದ್ದಾರೆ. ಅಕ್ಷತಾ ವಿ. ಹಾವಂಜೆ ಈ ಗೀತೆಯನ್ನು ಹಾಡಿದ್ದಾರೆ. 'ಪ್ಲಾಸ್ಟಿಕ್ ವಿರುದ್ಧ ಹೋರಾಡಿ ಸೋತ ಭೂಮಿಯನ್ನು ಪ್ಲಾಸ್ಟಿಕ್​​ ಎಂಬ ಮಾರಿ ಸುತ್ತುವರೆದು ಬಂಧಿಸಿರುವಾಗ ಆಕೆಯನ್ನು ಕಾಪಾಡಲು ದೈವ ನಾನಾ ಪ್ರಯತ್ನ ಮಾಡುತ್ತದೆ. ಈ ಕಾನ್ಸೆಪ್ಟನ್ನು ಆಲ್ಬಂನಲ್ಲಿ ಸುಂದರವಾಗಿ ತೋರಿಸಲಾಗಿದೆ. ಛಾಯಾಗ್ರಹಣ ಕೂಡಾ ಯತೀಶ್ ಅವರೇ ಮಾಡಿದ್ದಾರೆ. ಈ ಆಲ್ಬಂಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. 'ಪ್ಲಾಸ್ಟಿಕ್ ನಿರ್ಮೂಲನೆಯಲ್ಲಿ ಎಲ್ಲರೂ ಕೈ ಜೋಡಿಸಿ, ಪ್ಲಾಸ್ಟಿಕ್ ಬಳಸುವುದನ್ನು ತಡೆಗಟ್ಟಿ ಎಂಬುದು ಈ ಆಲ್ಬಂ ಉದ್ದೇಶ ಆಗಿದೆ.

ಸತ್ಯಮಂಜ

For All Latest Updates

TAGGED:

ABOUT THE AUTHOR

...view details