ಕಂಪ್ಯೂಟರ್ ವಿಜ್ಞಾನಿಯೊಬ್ಬರು ಚಿತ್ರರಂಗದಲ್ಲಿ ಮಿಂಚಬೇಕೆಂಬ ದೊಡ್ಡ ಕನಸು ಹೊತ್ತು ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ರಿವೈಂಡ್’ ಚಿತ್ರದ ಮೂಲಕ ನಟ, ನಿರ್ದೇಶಕರಾಗಿ ಮಿಂಚುವ ಕನಸು ಕಟ್ಟಿದ್ದಾರೆ.
‘ರಿವೈಂಡ್’ ಮೂಲಕ ಚಂದನವನಕ್ಕೆ ಕಂಪ್ಯೂಟರ್ ವಿಜ್ಞಾನಿಯ ಎಂಟ್ರಿ.. - Rewind
ಕಂಪ್ಯೂಟರ್ ವಿಜ್ಞಾನಿಯೊಬ್ಬರು ಚಿತ್ರರಂಗದಲ್ಲಿ ಮಿಂಚಬೇಕೆಂಬ ದೊಡ್ಡ ಕನಸು ಹೊತ್ತು ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ರಿವೈಂಡ್’ ಚಿತ್ರದ ಮೂಲಕ ನಟ, ನಿರ್ದೇಶಕರಾಗಿ ಮಿಂಚುವ ಕನಸು ಕಟ್ಟಿದ್ದಾರೆ.
ವಿಜ್ಞಾನಿಯಾಗಿರುವ ನಟ, ನಿರ್ದೇಶಕ ತೇಜಸ್ ಅವರಿಗೆ ಚಿತ್ರರಂಗ ಹೊಸದಲ್ಲ. ತೇಜಸ್ ಈಗಾಗಲೇ ತಮಿಳಿನಲ್ಲಿ ಕೊಂಜಂ ವೆಯಿಲ್ ಕೊಂಜಂ, ಮಝಾಯಿ, ಕದಲು ಕು ಮರಣಾನಂ ಇಲ್ಲೈ, ಗಾಂಥಮ್ ಮತ್ತು ಮೋಜಿವತ್ ಯಾಥ್ಲೇಲ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ನಟ ತೇಜಸ್ ಕನ್ನಡ ಚಿತ್ರರಂಗದ ಹಿರಿಯ ನಟರಾದ ಸುಂದರ್ ರಾಜ್ ಅವರ ತಮ್ಮನ ಮಗ ಎನ್ನುವುದು ಮತ್ತೊಂದು ವಿಶೇಷವಾಗಿದೆ. ತಮಿಳು ಚಿತ್ರರಂಗದಲ್ಲಿ ಈಗಾಗಲೇ ಸಿನಿ ಜರ್ನಿ ಆರಂಭಿಸಿರುವ ತೇಜಸ್ ಅವರಿಗೆ ‘ರಿವೈಂಡ್’ ಕನ್ನಡದ ಮೊದಲ ಚಿತ್ರವಾಗಿದೆ. ಈಗಾಗಲೇ ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ.
ರಿವೈಂಡ್ ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ತೆರೆ ಕಾಣಲಿದೆ. ಚಿತ್ರದ ಕೆಲ ಭಾಗವನ್ನು ಬೆಂಗಳೂರು ಹಾಗೂ ಸಿಂಗಪುರದಲ್ಲಿ ಶೂಟಿಂಗ್ ಮಾಡಿದ್ದು, ಇನ್ನುಳಿದ ಭಾಗವನ್ನು ಯುರೋಪ್ನಲ್ಲಿ ಚಿತ್ರದ ಶೂಟಿಂಗ್ ಮಾಡಲು ಪ್ಲಾನ್ ಮಾಡಿರುವುದಾಗಿ ನಿರ್ದೇಶಕ ತೇಜಸ್ ತಿಳಿಸಿದರು. ಈ ಚಿತ್ರದಲ್ಲಿ ನಾಯಕಿಯಾಗಿ ಕಿರುತೆರೆ ನಟಿ ಚಂದನ ನಟಿಸಿದ್ದಾರೆ. ರಿವೈಂಡ್ ಚಿತ್ರದಲ್ಲಿ 4 ಹಾಡುಗಳಿದ್ದು, ಎ.ಆರ್.ರೆಹಮಾನ್ ಅವರ ಶಿಷ್ಯ ಸಬೇಶ್ ಸೋಲೋಮೊನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಸಂಪತ್ ಕುಮಾರ್, ಸುಂದರ ರಾಜ್ ಸೇರಿದಂತೆ ಬಹುತಾರಾಗಣವಿದೆ. ಈ ವರ್ಷದ ಅಂತ್ಯದಲ್ಲಿ ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.